ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಮಾಲೂರು ತಾಲೂಕು- ಕೋಲಾರ ಜಿಲ್ಲೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಮಾಲೂರು ವಲಯ, ಮಾಲೂರು ತಾಲೂಕು ಆರೋಗ್ಯ ಕೇಂದ್ರ ಮಾಲೂರು , ಪೊಲೀಸ್ ಠಾಣೆ ಮಾಲೂರು, ಕಾರ್ಯನಿರತ ಪತ್ರಕರ್ತರ ಸಂಘ ಮಾಲೂರು, ಸ್ಥಳೀಯ ಸಂಘ ಸಂಸ್ಥೆಗಳು, ಸ್ಥಳೀಯ ಶಿಕ್ಷಣ ಸಂಸ್ಥೆಗಳು, ದಾನಿಗಳು ಹಾಗೂ ಸಾರ್ವಜನಿಕ ಸಹಕಾರ ಮತ್ತು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಇವರೆಲ್ಲರುಗಳ ಸಹಕಾರದೊಂದಿಗೆ ಡಾll ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಬೆಳ್ತಂಗಡಿ ಇವರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ 1709 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಅಂಬೇಡ್ಕರ್ ಸಮುದಾಯ ಭವನ, ಕೋಲಾರ ರಸ್ತೆ ಮಾಲೂರುಇಲ್ಲಿ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಎ ನಾಗರಾಜು ಮಾಜಿ ಶಾಸಕರು ಮಾಲೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪೂಜ್ಯ ಹೆಗಡೆಯವರು ಮಾಡಿರುವ ಸ್ವಸ್ಥ ಸಮಾಜ ಕಾರ್ಯ ಇದು ಒಂದು ಕುಟುಂಬವನ್ನು ಪರಿವರ್ತನೆ ಮಾಡುವುದರ ಜೊತೆಗೆ ಸ್ವಸ್ಥವಾದ ಸಮಾಜ ನಿರ್ಮಾಣವಾಗಬೇಕೆಂಬುವ ಈ ಕಾರ್ಯ ಈ ತಾಲೂಕಿನಲ್ಲಿ ಅನುಷ್ಠಾನವನ್ನ ಮಾಡಿರುವ ನಮಗೆ ಈ ಕಾರ್ಯದ ಮೂಲಕ ಸೇವೆ ಮಾಡುವ ಭಾಗ್ಯ ನಮ್ಮದಾಗಿದೆ ಹೇಳುವುದರ ಮುಖೇನ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಅಧ್ಯಕ್ಷತೆಯನ್ನು ಶ್ರೀ ಕೃಷ್ಣಪ್ಪ ವಿ, ಅಧ್ಯಕ್ಷರು ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಮಾಲೂರು ಇವರು ವಹಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು.
ಶ್ರೀ ತಿಮ್ಮಯ್ಯ ನಾಯ್ಕ್ ಯೋಜನಾಧಿಕಾರಿಗಳು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗ ಬೆಂಗಳೂರು ,ಇವರು ಮಾತನಾಡಿ ಶಿಬಿರದ ಎಂಟು ದಿನದ ಪರಿವರ್ತನೆಯ & ಅಭಿವೃದ್ಧಿಯ ಪಥ ಮತ್ತು ಸಾಧನೆಯ ಪರಿಚಯದೊಂದಿಗೆ ಪ್ರಾಸ್ತಾವಿಕ ಮಾತನ್ನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಪದ್ಮಯ್ಯ ಸಿ ಎಚ್ ರವರು, ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳೆದು ಬಂದ ಪತ ಮತ್ತು ಅಭಿವೃದ್ಧಿಯ ಬಗ್ಗೆ ಮಾರ್ಗದರ್ಶನ ನೀಡಿದರು.
ಸಭಾ ವೇದಿಕೆಯಲ್ಲಿ ಶ್ರೀ ತಬಲ ನಾರಾಯಣಪ್ಪನವರು, ಊರಿನ ಗಣ್ಯರು. ಶ್ರೀ ಎಂ. ಪಿ ವಿಜಯಕುಮಾರ್ ರವರು, ಮಾಜಿ ಪುರಸಭಾ ಸದಸ್ಯರು. ಶ್ರೀ ಎಂ ವಿ ವೇಮನ, ಪುರಸಭೆ ಸದಸ್ಯರು, ಶ್ರೀ ಪರಮೇಶ್ ಪುರಸಭಾ ಸದಸ್ಯರು, ಶ್ರೀ ಅಶ್ವಥ್ ರೆಡ್ಡಿ , ಉಪಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಮಾಲೂರು, ಇವರುಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರು, ಶ್ರೀ ದಿನೇಶ್ ಶಿಬಿರಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀ ವೆಂಕಟೇಶ್ ಆರೋಗ್ಯ ಸಹಾಯಕರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ತಾಲೂಕಿನ ಎಲ್ಲಾ ಮೇಲ್ವಿಚಾರಕರು, ತತ್ಸಮಾನ ಸಿಬ್ಬಂದಿಗಳು, ಕಛೇರಿ ಸಿಬ್ಬಂದಿಗಳು, ವಲಯದ ಸೇವಾಪ್ರತಿನಿಧಿಗಳು, ಒಕ್ಕೂಟದ ಪಲಾಧಿಕಾರಿಗಳು, ಪ್ರಗತಿಬಂಧು ಸ್ವ-ಸಹಾಯ ಸಂಘದ ಫಲಾನುಭವಿ ಸದಸ್ಯರು, ಸಾರ್ವಜನಿಕರು, ನವಜೀವನ ಸಮಿತಿ ಸದಸ್ಯರುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕಾರ್ಯಕ್ರಮವನ್ನು *ಶ್ರೀ ಸತೀಶ್ ಎಚ್, ಯುವಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಮಾಲೂರು ತಾಲೂಕು ಇವರು ಸ್ವಾಗತಿಸಿ, ಶ್ರೀ ರಮೇಶ್, ಮೇಲ್ವಿಚಾರಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಮಾಲೂರು ವಲಯ ಇವರು ನಿರೂಪಿಸಿ, ಶ್ರೀ ಮಧುಸೂದನ್ ಕೃಷಿ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಮಾಲೂರು ಇವರು ವಂದಿಸಿದರು.
