ಮೈಸೂರು ಪ್ರಾದೇಶಿಕ ವಿಭಾಗದ, ಮಂಡ್ಯ ಜಿಲ್ಲೆಯ, ನಾಗಮಂಗಲ ತಾಲೂಕಿನ, ಶ್ರೀ ಆಂಜನೇಯ ಸಮುದಾಯ ಭವನದಲ್ಲಿ 1680 ನೇ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಎಲ್ಲಾ ಗಣ್ಯರ ಸಮಕ್ಷಮದಲ್ಲಿ ನೆರವೇರಿತು, ಈ ಸಂದರ್ಭದಲ್ಲಿ ಮೈಸೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಗಳಾದ ಶ್ರೀಯುತ ಮಾಧವರವರು ಜನಜಾಗೃತಿ ಕಾರ್ಯಕ್ರಮಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾಹಿತಿ ತಿಳಿಸಿದರು, ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಂಡ್ಯ ಜಿಲ್ಲಾ ನಿರ್ದೇಶಕರು ಶ್ರೀಮತಿ ಚೇತನ ರವರು ಈ ಕಾರ್ಯಕ್ರಮಗಳ ಬಗ್ಗೆ ತಮ್ಮ ಮಾತಿನೊಂದಿಗೆ ವಿಚಾರ ತಿಳಿಸಿದರು,ಬಳಿಕ ಶ್ರೀ ಹನುಮಂತಯ್ಯ ಅಧ್ಯಕ್ಷರು ಜನ ಜಾಗೃತಿ ವೇದಿಕೆ ಮಂಡ್ಯ ಜಿಲ್ಲೆ ಇವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ, ವ್ಯವಸ್ಥಾಪಕ ಅಧ್ಯಕ್ಷರು ಶ್ರೀ ದಿಲೀಪ್ ಕುಮಾರ್ ರವರು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕಾರವನ್ನು ಕೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ಈ ಸಂದರ್ಭದಲ್ಲಿ ಶ್ರೀ ಮಂಜೇಶ್ ಚೆನ್ನಾಪುರ ಸದಸ್ಯರು ಜನಜಾಗೃತಿ ವೇದಿಕೆ ಮಂಡ್ಯ ಜಿಲ್ಲೆ, ನಂಜೇಗೌಡ ಉಪಾಧ್ಯಕ್ಷ ಗ್ರಾಮ ಪಂಚಾಯತ್, ಶ್ರೀಮತಿ ಕಲಾವತಿ ಹೊನ್ನಲಿಂಗೇಗೌಡ ಅಧ್ಯಕ್ಷರು ಗ್ರಾಮ ಪಂಚಾಯತ್, ಆರೋಗ್ಯ ಕಾರ್ಯಕರ್ತರು ಶ್ರೀ ವೆಂಕಟೇಶ್, ವಲಯದ ಮೇಲ್ವಿಚಾರಕರುಗಳು, ಎಲ್ಲಾ ಸೇವಾ ಪ್ರತಿನಿಧಿಗಳು, ನವಜೀವನ ಸಮಿತಿಯ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
