1679ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ

Janajagurthi Vedike News

ಗೌರಿಬಿದನೂರ್ ನಲ್ಲಿ 1679ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಗೌರಿಬಿದನೂರು ತಾಲೂಕಿನ ಸಾಯಿ ಕೃಷ್ಣ ಫಂಕ್ಷನ್ ಹಾಲಿನಲ್ಲಿ ಕಳೆದ 8 ದಿನಗಳಿಂದ ನಡೆಯುತ್ತಿರುವ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಜರುಗಿದವು ಮಧ್ಯವಸನಕ್ಕೆ ದಾಸರಾಗಿರುವ 50 ಜನ ಶಿಬಿರಾರ್ಥಿಗಳನ್ನ ಸೇರಿಸಿ ಮನ ಪರಿವರ್ತನೆ ಮಾಡುವ ಮೂಲಕ ಗೌರಿಬಿದನೂರಿನ ಜನತೆ ಆಶ್ಚರ್ಯ ಪಡುವಂತೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಶೀನಪ್ಪ ಎಂ ಮಾತನಾಡಿ ಪೂಜ್ಯರ ಆಶಯಗಳನ್ನು ಗ್ರಾಮೀಣ ಭಾಗದ ಜನರಿಗೆ ಯೋಜನೆಯ ಮೂಲಕ ತಲುಪಿಸುವ ಕೆಲಸ ಹಾಗೂ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಇಂಥ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದರು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶ್ರೀಮತಿ ಜ್ಯೋತಿ ರೆಡ್ಡಿ ಅವರು ಮಾತನಾಡಿ ಇಂಥ ಕಾರ್ಯಕ್ರಮದ ಪ್ರೇರಣೆಯ ಮೂಲಕ ದುಶ್ಚಟ ಮುಕ್ತರಾಗಿ ಸಮಾಜದ ಮುಖ್ಯ ವಾಹಿನಿಗೆ ಬನ್ನಿ ಎಂದು ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಶಾಸಕರ ಆಪ್ತರಾದ ಶ್ರೀ ಶ್ರೀನಿವಾಸ ಗೌಡ, ಶ್ರೀ ಶಫಿ ಉಲ್ಲಾ, ಶ್ರೀ ಮೋಹನ್, ಶ್ರೀಮತಿ ಪ್ರಭಾ ನಾರಾಯಣಗೌಡ ಚಂದ್ರಶೇಖರ್ ರೆಡ್ಡಿ, ಶ್ರೀ ಯಲ್ಲವಳ್ಳಿ ರಮೇಶ್, ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಶ್ರೀ ಭಾಸ್ಕರ ಶಿಬಿರದ ಗೌರವಾಧ್ಯಕ್ಷರಾದ ಶ್ರೀ ಅವಲಪ್ಪ ಶಿಬಿರದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಜಿಲ್ಲಾ ನಿರ್ದೇಶಕರಾದ ಪ್ರಶಾಂತ್ ಸಿ ಎಸ್ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ನಾಗರಾಜ್ ನಾಯ್ಕ್ ಶ್ರೀ ರವೀಂದ್ರ ಕುಮಾರ ಚಂದ್ರಮೂಳಿ ಶಿಬಿರದ ಆರೋಗ್ಯ ಸಹಾಯಕಿ ಸೌಮ್ಯ, ಶ್ರೀಮತಿ ಲಕ್ಷ್ಮಿ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯರುಗಳು ಜಿಲ್ಲೆಯ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಯಾಗಿ ನಾಗರಾಜ್ ಸ್ವಾಗತಿಸಿದರು ಮೇಲ್ವಿಚಾರಕಿ ಶ್ರೀಮತಿ ಉಷಾ ವಂದಿಸಿದರು ಈ ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ಅಶ್ವಿನಿ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಗಣ್ಯಮಾನ್ಯರು ಯೋಜನೆಯ ಕಾರ್ಯಕರ್ತರು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.