1660ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಮತ್ತು ಸಮಾರೋಪ ಸಮಾರಂಭ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಗೋಕಾಕ್ – 2 ತಾಲೂಕು, ಜಿಲ್ಲಾ ಜನಜಾಗೃತಿ ವೇದಿಕೆ ಬೆಳಗಾವಿ – 2 ಜಿಲ್ಲೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಕೊಣ್ಣೂರ ವಲಯ, ಗ್ರಾಮ ಪಂಚಾಯಿತಿ ಮೇಲ್ಮಟ್ಟಿ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಗೋಕಾಕ್, ಶ್ರೀ ಲಕ್ಷ್ಮೀದೇವಿ ಅರ್ಬನ್ ಕೋ – ಆಪರೇಟಿವ್ ಸೌಹಾರ್ದ ಸಹಕಾರಿ ಸೇವಾ ಸೊಸೈಟಿ ಮೇಲ್ಮಟ್ಟಿ, ಸ್ವಾಮಿ ವಿವೇಕಾನಂದ ಯುವಕ ಮಂಡಳಿ ಮೇಲ್ಮಟ್ಟಿ, ಶ್ರೀ ಗಜಾನನ ಸಹಕಾರಿ ಸಂಘ ನಿಯಮಿತ ಮೇಲ್ಮಟ್ಟಿ, ಶ್ರೀ ಲಕ್ಷ್ಮಿ ಗಜಾನನ ಯುವಕರ ಸಂಘ ನಿಯಮಿತ ಮೇಲ್ಮಟ್ಟಿ, ಶ್ರೀ ಧರ್ಮಸ್ಥಳ ಮಂಜುನಾಥ ಸಂಘ ಮೇಲ್ಮಟ್ಟಿ, ಜೈ ಶ್ರೀರಾಮ ಯುವಕರ ಸಂಘ ಮೇಲ್ಮಟ್ಟಿ, ಜೈ ವಾಲ್ಮೀಕಿ ಯುವಕರ ಸಂಘ, ಕರ್ನಾಟಕ ರಾಜ್ಯ ರೈತರ ಸಂಘ ಹಸಿರು ಸೇನಾ ಮೇಲ್ಮಟ್ಟಿ, ಮದರ ಇಂಡಿಯಾ ಯುವಕ ಮಂಡಳಿ ಮೇಲ್ಮಟ್ಟಿ, ಶ್ರೀ ತಳದಾದೇವಿ ಜಾತ್ರಾ ಕಮಿಟಿ ಮೇಲ್ಮಟ್ಟಿ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕೊಣ್ಣೂರ ವಲಯ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಹಕಾರಗಳೊಂದಿಗೆ ಪರಮಪೂಜ್ಯ ಡಾll ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾll ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಬೆಳ್ತಂಗಡಿ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ 1660ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಮತ್ತು ಸಮಾರೋಪ ಸಮಾರಂಭ ಕಾರ್ಯಕ್ರಮವು ಮೇಲ್ಮಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.