1654ನೇ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಚಿಕ್ಕೋಡಿ ಜಿಲ್ಲೆಯ ಸಂಕೇಶ್ವರ ತಾಲೂಕಿನ ನೇರ್ಲಿ ವಲಯದ ಶ್ರೀ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ 1654ನೇ ಮಧ್ಯವರ್ಜನ ಶಿಬಿರವು ಘೋಡಗೇರಿ ವಿರಕ್ತಮಠದ ಶ್ರೀ ಮ ನಿ ಪ್ರ ಕಾಶಿನಾಥ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೇರ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಲಕ್ಷ್ಮಿ ರಾಮಪ್ಪ ಮಾಳಿಗೆ ಇವರ ಅಮೃತ ಹಸ್ತದಲ್ಲಿ ಉದ್ಘಾಟನೆಗೊಂಡಿತು. ಕಾರ್ಯಕ್ರಮದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಬಸವರಾಜ ಭೀಮಗೌಡ ಪಾಟೀಲ, ಸಂಕೇಶ್ವರ ಜನಜಾಗೃತಿ ಸದಸ್ಯರಾದ ವಿಶ್ವನಾಥ ಪುರಾಣಿಕ ಮಠ, ಊರಿನ ಗಣ್ಯರಾದ ಭರಮಗೌಡ ಪಾಟೀಲ, ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸವಿತಾ ಚೌಹಾನ ಉಪಸ್ಥಿತರಿದ್ದು ಶುಭ ಹಾರೈಸಿರುತ್ತಾರೆ. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಜನಜಾಗೃತಿ ಧಾರವಾಡ ಪ್ರಾದೇಶಿಕ ಯೋಜನಾಧಿಕಾರಿಗಳಾದ ನಾಗೇಶ್ ಸರ್ ಅವರು ಮಾತನಾಡಿದ್ದು , ಸಂಕೇಶ್ವರ ಯೋಜನಾಧಿಕಾರಿಗಳಾದ ಶ್ರೀಮತಿ ಶಕುಂತಲಾ ಮೇಡಂ ಅವರು ಎಲ್ಲರಿಗೂ ವಂದನಾರ್ಪಣೆಗೆದರು.