1639 ನೇ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಪ್ರಾರಂಭಗೊಂಡ 1639 ನೇ ಮಧ್ಯವರ್ಜನ ಶಿಬಿರದ ಉದ್ಘಾಟನೆ ಮಾಜಿ ಸಚಿವರು ,ಹಾಲಿಶಾಸಕರು ಆದ ಡಿಸಿ ತಮ್ಮಣ್ಣ& ನಮ್ಮ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಬಿ ಜಯರಾಮ ನೆಲ್ಲಿತ್ತಾಯ ಹಾಗೂ ಇತರ ಗಣ್ಯರಿಂದ, ಉದ್ಘಾಟನಾ ಕಾರ್ಯಕ್ರಮ.ಮಧ್ಯವರ್ಜನ ಶಿಬಿರ ಯಶಸ್ವಿ ಆಗುವುದರ ಜೊತೆಗೆ ಭಾಗವಹಿಸಿದ ಶಿಬಿರಾರ್ಥಿಗಳು ಪಾಣಮುಕ್ತಜೀವನ ನಡೆಸುವಂತಾಗಲಿ… ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗಡೆಯವರ ಸಮಾಜಮುಖಿ ಚಿಂತನೆ ಮತ್ತು ಅದಕ್ಕೆ ಪೂರಕವಾದ ಯೋಜನೆಗಳು ನಿಜವಾಗಿಯೂ ಅಭಿನಂದನಾ ಅರ್ಹವಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ರಾದೇಶಿಕ ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಹನುಮಂತು, ಅಧ್ಯಕ್ಷರಾದ ಲಿಂಗೇಗೌಡ, ಪುರಸಭಾ ಅಧ್ಯಕ್ಷರಾದ ಸುರೇಶ್, ಇಲ್ಲ ನಿರ್ದೇಶಕರಾದ ಶ್ರೀಮತಿ ಚೇತನ, ಪ್ರಾದೇಶಿಕ ಕಚೇರಿಯ ಆಡಳಿತ ಯೋಜನಾಧಿಕಾರಿ ಪ್ರಸಾದ್, ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್, ಮದ್ದೂರ್ ತಾಲೂಕಿನ ಯೋಜನಾಧಿಕಾರಿಯ ಯೋಗೀಶ್ ಕನ್ಯಾಡಿ, ಶಿವರಾಧಿಕಾರಿ ದಿವಾಕರ್ ಆರೋಗ್ಯ ಸಹಾಯಕಿ ಶ್ರೀಮತಿ ಪ್ರಸಿಲ್ಲ, ಮೇಲ್ವಿಚಾರಕರಾದ ಶ್ರೀಮತಿ ಜ್ಯೋತಿ, ಕಿರಣ್, ಜನಜಾಗೃತಿ ಸದಸ್ಯರು, ಉಪಸ್ಥಿತರಿದ್ದರು.