1625 ನೇ ಸಮುದಾಯ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಹುಣಸೂರು 2 ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಗದ್ದಿಗೆಯ ಶ್ರೀ ಕೆಂಡ ಗಣೇಶ್ವರ ಮತ್ತು ಮಹದೇಶ್ವರ ದೇವಸ್ಥಾನದ ಸಭಾಭವನದಲ್ಲಿ 1625 ನೇ ಮಧ್ಯವರ್ಜನ ಶಿಬಿರವನ್ನು ಉದ್ಘಾಟನೆ ಮಾಡಲಾಯಿತು.ಶ್ರೀ ಗುರುಕೆಂಡ ಗಣೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಕೆಂಡ ಗಣಪ್ಪನವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾನ್ಯ ನಿರ್ದೇಶಕರಾದ ಮುರುಳಿಧರ್ HL ಸರ್ ಅವರು ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಹಂದನಳ್ಳಿ ಸೋಮಶೇಖರ್ ಜನಜಾಗೃತಿ ಕಾರ್ಯಕ್ರಮ ಮುಖಾಂತರ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಮತ್ತು ಮಧ್ಯ ವರ್ಜನ ಶಿಬಿರದ ಪರಿಣಾಮಗಳ ಕುರಿತು ಮಾತನಾಡಿದರು. ಶ್ರೀ ಪುಣ್ಯ ಶೀಲ ದೇವಸ್ಥಾನದ ಟ್ರಸ್ಟಿ, ಗಣ್ಯರಾದ ಸೂರ್ಯ ಕುಮಾರ್, ರತ್ನಾಯರವರು, ಶುಭ ಹಾರೈಸಿದರು . ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ದೇವರಾಜ ರವರು ಶಿಬಿರದ ಯಶಸ್ಸಿಗೆ ಸರ್ವರ ಸಹಕಾರ ಕೋರಿ ಈ ಕಾರ್ಯಕ್ರಮದ ಯಶಸ್ಸಿಗೆ ತಾವೆಲ್ಲರೂ ಕಾರಣಕರ್ತರಾಗಬೇಕು ಎಂದು ವಿನಂತಿಸಿದರು. ತಾಲೂಕು ಯೋಜನಾಧಿಕಾರಿ ಶ್ರೀ ಧನಂಜಯರವರು ಶಿಬಿರದ ಯಶಸ್ಸಿಗೆ ಪೂರಕವಾದ ವ್ಯವಸ್ಥೆಗಳನ್ನು ಮಾಡಿ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು. ಪ್ರಾದೇಶಿಕ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಭಾಸ್ಕರ್ ರವರು ಕಾರ್ಯಕ್ರಮದ ರೂಪವೇಷಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅಧಿಕಾರಿ ಕುಮಾರ್, ಆರೋಗ್ಯ ಸಹಾಯಕಿ ಶ್ರೀಮತಿ ಸೌಮ್ಯ, ಮೇಲ್ವಿಚಾರಕರಾದ ಬಾಬು, ಜನಜಾಗೃತಿ ಕಾರ್ಯಕ್ರಮಗಳ ಮೇಲ್ವಿಚಾರಕ ಕಿರಣ್, ತಾಲೂಕು ಮಟ್ಟದ ನವ ಜೀವನ ಸಮಿತಿ ಅಧ್ಯಕ್ಷ ಕೃಷ್ಣೆಗೌಡ, ಸೇವಾ ಪ್ರತಿನಿಧಿಗಳು , ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳು, ನವಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.16