1623ನೇ ಮಧ್ಯವರ್ಜನ ಶಿಬಿರವನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೊಟಿಹಾಳ್ ಗ್ರಾಮದ ಶಾದಿ ಮಹಲ್ ಸಭಾಭವನದಲ್ಲಿ ಇಳಕಲ್ ಚಿತರಗಿ ಸಂಸ್ಥಾನ ಮಠದ ಪೂಜ್ಯ ಗುರು ಮಹಾಂತ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಉದ್ಘಾಟನೆಗೊಂಡಿತು. ಸಮಾರಂಭದ ಅಧ್ಯಕ್ಷತೆಯನ್ನು ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ರಾಜೇಸಾಬ್ H. ಯಲಬುರ್ಗಿ ವಹಿಸಿದ್ದು, ಗೌರವಾಧ್ಯಕ್ಷರಾದ ಚಂದ್ರಶೇಖರ್ ಸ್ವಾಮಿಗಳು ಕೇಸುರ, ಕೊಪ್ಪಳ ಜಿಲ್ಲಾ ನಿರ್ದೇಶಕರಾದ ಸದಾನಂದ ಬಂಗೇರ ಸರ್, ಕೊಪ್ಪಳ ಜಿಲ್ಲಾ ಜನಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷರಾದ ದೇವೇಂದ್ರ, ಕೇಸರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಈರಮ್ಮ ಚಿಗುಂಟಿ, ದೋಟಿಹಾಳ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ಕುಂಬಾರ, ಶಿಬಿರದ ಉಪಾಧ್ಯಕ್ಷರುಗಳಾದ ಕರಿಯಪ್ಪ ಪೂಜಾರಿ ತಿಪ್ಪನಗೌಡ ಪಾಟೀಲ್, ಶರಣಪ್ಪ ಗೋತಗಿ, ಹನುಮಂತರಾಯ ದೇಸಾಯಿ ಉಪಸ್ಥಿತರಿದ್ದು ಶುಭ ಹಾರೈಸಿರುತ್ತಾರೆ. ಪ್ರಾಸ್ತಾವಿಕ ಮಾತುಗಳನ್ನು ಕೊಪ್ಪಳ ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿಗಳಾದ ಮಾಧವನಾಯಕ್ ಸರ್ ಮಾತನಾಡಿದ್ದು, ಕ್ಷೇತ್ರ ಯೋಜನಾಧಿಕಾರಿ ಶೇಖರ್ ನಾಯಕ್ ಸ್ವಾಗತ ಮಾಡಿದ್ದು ವಲಯ ಮೇಲ್ವಿಚಾರಕರಾದ ಮಂಜುನಾಥ್ ಸರ್ ವಂದನಾರ್ಪಣೆ ಗೈದಿರುತ್ತಾರೆ.
