1619ನೇ ಮಧ್ಯವರ್ಜನ ಶಿಬಿರದ ಉದ್ಘಾಟನೆ

Janajagurthi Vedike News

ಖಾಸಬಾಗ್ ಯೋಜನಾ ವ್ಯಾಪ್ತಿ ಬೆಳಗಾವಿ ಜಿಲ್ಲೆ ಧಾರವಾಡ ಪ್ರಾದೇಶಿಕ ವಿಭಾಗದ ಬೆಳಗಾವಿ ಜಿಲ್ಲೆಯ ಖಾಸಭಾಗ್ ಯೋಜನಾ ವ್ಯಾಪ್ತಿಯ ಹಲಗಾದ 1008 ಭಗವಾನ್ ಶ್ರೀ ಪಾಶ್ವನಾಥ ದಿಗಂಬರ ಜೈನ ಮಂದಿರ ದಲ್ಲಿ ಇಂದು 1619ನೇ ಮಧ್ಯವರ್ಜನ ಶಿಬಿರಕ್ಕೆ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪರಮಪೂಜ್ಯ ಬಾಲಾಚಾರ್ಯ ಶ್ರೀ 108 ಸಿದ್ದಸೇನ ಮುನಿ ಮಹಾರಾಜರು ಹಲಗಾ ದಿವ್ಯ ಸಾನಿಧ್ಯ ವಹಿಸಿದ್ದರು ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಸಂಜಯ ಪಾಟೀಲ್ ಮಾಜಿ ಶಾಸಕರು ಬೆಳಗಾವಿ ಗ್ರಾಮೀಣ, ಶ್ರೀ ಮಹಾವೀರ್ ತವನಪ್ಪ ಬಸ್ತವಾಡ, ಧನ್ಯಕುಮಾರ್ ದೇಸಾಯಿ ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ , ಶ್ರೀ ಮಲ್ಲಿಕಾರ್ಜುನ್ ವಾಲಿ, ನಿರ್ದೇಶಕರಾದ ಶ್ರೀ ಪ್ರದೀಪ್ ಶೆಟ್ಟಿ ಶ್ರೀ ಅಣ್ಣಾ ಸಾಹೇಬ್ ಘೊರ್ಪಡೆ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳು, ಜನ ಜಾಗೃತಿ ಯೋಜನಾಧಿಕಾರಿಗಳು, ಶಿಬಿರಾಧಿಕಾರಿ, ಆರೋಗ್ಯ ಸಹಾಯಕರು, ಮೇಲ್ವಿಚಾರಕರು ಉಪಸ್ಥಿತರಿದ್ದರು.