1599ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ಶಿಗ್ಗಾವ್ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಗೌರವಾನ್ವಿತ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರ ವಿಶೇಷ ಸಹಕಾರದೊಂದಿಗೆ ಶ್ರೀಮತಿ ಗೌರಮ್ಮ ಎಸ್ ಬೊಮ್ಮಾಯಿ ಸಭಾಂಗಣದಲ್ಲಿ 1599ನೇ ಮತ್ತೆ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶ್ರೀ.ಷ. ಬ್ರ. ರೇವಣಸಿದ್ದೇಶ್ವರ ಶಿವಾಚಾರ್ಯರು ಅರಳೆಲೆ ಮಠ ಬಂಕಾಪುರ ಪೂಜ್ಯರು ದಿವ್ಯ ಸಾನಿಧ್ಯ ವಹಿಸಿದ್ದರು ಸಮಾರೋಪ ಸಮಾರಂಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ರಾಜಣ್ಣ ಕೊರವಿ, ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೇಗೌಡ, ಶ್ರೀ ಮುತ್ತಣ್ಣ ಎಲಿಗಾರ್, ಸಿ ಮೋಹನ್ ಮೆಣಸಿನಕಾಯಿ,ಶ್ರೀ ಶಿವಾನಂದ್ ಮ್ಯಾಗೇರಿ, ಶ್ರೀ ಶಶಿಧರ್ ಎಲಿಗಾರ್, ಶ್ರೀ ನಾಗರಾಜ್ ಶೆಟ್ಟಿ, ಶ್ರೀಮತಿ ರೂಪ ಬನ್ನಿಕೊಪ್ಪ, ಶ್ರೀ ಕಿರಣ್ ಪಾಟೀಲ್, ಉಪಸ್ಥಿತರಿದ್ದರು. ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಗಳಾದ ಶ್ರೀ ಜಗದೀಶ್, ಮಾಜಿ ಸಂಸದರಾದ ಶ್ರೀ ಮಂಜುನಾಥ ಕುನ್ನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹನುಮಂತರಾಯ ಮೊದಲಾದ ಗಣ್ಯಾತಿಗಣ್ಯರು ಭಾಗವಹಿಸಿ ಮಾರ್ಗದರ್ಶನ ನೀಡಿರುತ್ತಾರೆ. ಈ ಶಿಬಿರದಲ್ಲಿ 89 ಮಂದಿಗೆ ವ್ಯಸನ ಮುಕ್ತರಾಗಲು ಚಿಕಿತ್ಸೆ ನೀಡಲಾಗಿದೆ.