1592 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಉಡುಪಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ತಾಲೂಕು 1 ಮತ್ತು 2ರ ನೇತೃತ್ವದಲ್ಲಿ 1592ನೇ ಮಧ್ಯವರ್ಜನ ಶಿಬಿರವು. ಕಂಡ್ಲೂರು ಶ್ರೀ ಭವಾನಿ ಕಲ್ಯಾಣ ಮಂಟಪದಲ್ಲಿ ಪ್ರಾರಂಭವಾಯಿತು. ಈ ಕಾರ್ಯಕ್ರಮವನ್ನು ಶ್ರೀ ಬಿ ಅಪ್ಪಣ್ಣ ಹೆಗಡೆ ದೀಪ ಬೆಳಗಿಸಿ ಚಾಲನೆ ನೀಡಿದರು. ಶಿಬಿರದ ಅಧ್ಯಕ್ಷರಾದ ಶ್ರೀ ಶಿವರಾಮ ಮೇಸ್ತ್ರಿ. ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು. ಕಂಡ್ಲೂರು ಪೊಲೀಸ್ ಠಾಣಾಧಿಕಾರಿ ಪವನ್ ನಾಯ್ಕ್. ತಾಲೂಕು ವೇದಿಕೆ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ರಟಾಡಿ . ವಿಜಯ ಪುತ್ರನ್. ಶ್ರೀ ಸದಾಶಿವ ಶೆಟ್ಟಿ. ಸುಬ್ರಾಯ ಪುರಾಣೀಕ. ದಿನಕರ ಶೆಟ್ಟಿ. ನಾರಾಯಣ ಪಾಲನ್. ಶ್ರೀಮತಿ ಪಾರ್ವತಿ ಯೋಜನಾಧಿಕಾರಿಗಳು. ಶಿಬಿರಾಧಿಕಾರಿ ದಿವಾಕರ ಪೂಜಾರಿ ಮತ್ತು ಆರೋಗ್ಯ ಸಹಾಯಕಿ ಶ್ರೀಮತಿ ಪ್ರೆಸೀಲ್ಲ .ವಲಯ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು. ಒಕ್ಕೂಟದ ಅಧ್ಯಕ್ಷರುಗಳು. ಶೌರ್ಯ ವಿಪತ್ತು ನಿರ್ವಹಣೆಯ ಸದಸ್ಯರು .ನವ ಜೀವನ ಸಮಿತಿ ಸದಸ್ಯರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ಶಿಬಿರಾರ್ಥಿಗಳನ್ನು ಶಿಬಿರಕ್ಕೆ ದಾಖಲು ಪಡಿಸಲಾಯಿತು.