1586ನೇ ಮಧ್ಯವರ್ಜನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿ

Janajagurthi Vedike News

ಮಾಗಡಿ: ತಾಲೂಕಿನ ಗುಮ್ಮಸಂದ್ರದ ಶ್ರೀ ರುದ್ರ ಮುನೇಶ್ವರ ಮಠದಲ್ಲಿ ನಡೆದ 1586ನೇ ಮಧ್ಯವರ್ಜನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿಯವರು ಮುಖ್ಯ ಅತಿಥಿಯಾಗಿ ಆಗಮಿಸಿ ಪೂಜ್ಯ ಧರ್ಮಸ್ಥಳದ ಧರ್ಮಾಧಿಕಾರಿಗಳ ಸೇವಾ ಕಾರ್ಯ ಚಟುವಟಿಕೆಗಳಲ್ಲಿ ಮಧ್ಯವರ್ಜನ ಶಿಬಿರವು ಅದ್ಭುತ ಕಾರ್ಯಕ್ರಮ ಈ ಕಾರ್ಯಕ್ರಮಕ್ಕೆ ಸಂಯಮ ಮಂಡಳಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಈ ಸಮಯದಲ್ಲಿ ಅವರನ್ನು ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯಿಂದ ಗೌರವಿಸಲಾಯಿತು. ಅವಕಾಶಗಳನ್ನು ಬಾಚಿಕೊಳ್ಳುವುದು ಮನುಷ್ಯನಲ್ಲಿ ಬಂದಾಗ ಪರಿವರ್ತನೆ ಸಾಧ್ಯ. ಮನುಷ್ಯ ದುಶ್ಚಟಗಳಿಗೆ ಬಲಿ ಬಿದ್ದಾಗ ತನ್ನತನವನ್ನು ಮರೆತು ಕೆಲವೊಮ್ಮೆ ಮೃಗೀಯವಾಗಿ ವರ್ತಿಸುತ್ತೇವೆ.. ಈ ಸ್ಥಿತಿ ನಿಮ್ಮದಾಗಿತ್ತು ಇಂತಹ ಸಂದರ್ಭದಲ್ಲಿ ಪೂಜ್ಯರ ಮಾರ್ಗದರ್ಶನದ ಜನಜಾಗೃತಿ ಮತ್ತು ಗ್ರಾಮದ ಅಭಿವೃದ್ಧಿ ಯೋಜನೆಯಿಂದ ವ್ಯವಸ್ಥಾಪನ ಸಮಿತಿಯ ಮುಂದಾಲತ್ವದಲ್ಲಿ ಬದಲಾವಣೆಗೆ ಒಂದು ಅವಕಾಶ ಸಿಕ್ಕಿದೆ ಇದನ್ನು ಬಾಚಿಕೊಳ್ಳುವ ಗುಣ ನಿಮ್ಮದಾಗಬೇಕು ಎಂದು ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯ ರವರು ಮಾಗಡಿಯಲ್ಲಿ ನಡೆದ 1586ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ 45 ಜನ ಶಿಬಿರಾರ್ಥಿ, ಕುಟುಂಬಗಳಿಗೆ ಮತ್ತು ನೆರೆದ ಸಭಿಕರಿಗೆ ಮಾರ್ಗದರ್ಶನ ನೀಡಿ, ವ್ಯವಸ್ಥಾಪನ ಸಮಿತಿಯ ಸರ್ವ ಪದಾಧಿಕಾರಿಗಳಿಗೆ ಹಾಗೂ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.ಸ್ವಾವಲಂಬನೆ ಬದುಕಿಗೆ ಧರ್ಮಸ್ಥಳದ ಪೂಜ್ಯರ ಪ್ರೇರಣೆ ಮತ್ತು ಕಾರ್ಯಗಳು ದೇಶಕ್ಕೆ ಮಾದರಿ ಎಂದು ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷರಾದ ವಿ ರಾಮಸ್ವಾಮಿಯವರು ಮಾರ್ಗದರ್ಶನ ನೀಡಿದರು ಹಾಗೂ ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿಯ ಸಹಕಾರವನ್ನು ಸ್ಮರಿಸಿಕೊಂಡರು ಈ ಸಂದರ್ಭ ಮುನೇಶ್ವರ ಮಠದ ಶ್ರೀ ಶ್ರೀ ಡಾಕ್ಟರ್ ಚಂದ್ರಶೇಖರ ಸ್ವಾಮೀಜಿಗಳು, ಬೆಲ್ಮುಲ್ ಅಧ್ಯಕ್ಷರಾದ ಕೃಷ್ಣಮೂರ್ತಿಯವರು, ಸಮಿತಿ ಅಧ್ಯಕ್ಷರಾದ ಎಂ ಎನ್ ಮಂಜುನಾಥ್, ಮಾದೇಶ್ವರ ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯ , ಜಿಲ್ಲಾ ನಿರ್ದೇಶಕರಾದ ಜಯಕರ ಶೆಟ್ಟಿ, ಯೋಜನಾಧಿಕಾರಿ ಗೋಪಾಲಕೃಷ್ಣ, ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್, ಆರೋಗ್ಯ ಸಹಾಯಕಿ ನೇತ್ರಾವತಿ ಇನ್ನಿತರರು ಉಪಸ್ಥಿತರಿದ್ದರು.