1580 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಮೈಸೂರು ಜಿಲ್ಲೆಯ ಕುವೆಂಪು ನಗರ ತಾಲೂಕಿನ ಚಾಮುಂಡಿ ಬೆಟ್ಟ ವಲಯದ ಮಹಾವೀರ ಜೈನ ಭವನ ಕಡಕೊಳದಲ್ಲಿ 1580 ನೇ ಮಧ್ಯವರ್ಜನ ಶಿಬಿರವು ತೆಂಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಕೆ ಆದಿರಾಜಯ್ಯ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಜ್ಜೆಹುಂಡಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರೂ 1580 ನೇ ಮಧ್ಯವರ್ಜನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರೂ ಆಗಿರುವ ರವಿ ಆರ್ ಅವರು ವಹಿಸಿದ್ದು ಮುಖ್ಯ ಅತಿಥಿಗಳಾಗಿ ಯೋಜನಾ ಜಿಲ್ಲಾ ನಿರ್ದೇಶಕರಾದ ಲಕ್ಷ್ಮಣ ಸರ್, ಕಡಕೋಳ ಉಪ ಠಾಣೆ ಪೊಲೀಸ್ ಠಾಣಾಧಿಕಾರಿ ಶ್ರೀ ವೆಂಕಟೇಶ್, ಮೈಸೂರು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀಕಂಠ ತೊಂಡೆಗೌಡ ಸರ್, ಕಡಕೋಳ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾಕ್ಟರ್ ಎಚ್ ಕೆ ಅರುಣ್ ಕುಮಾರ್ ಉಪಸ್ಥಿತರಿದ್ದು ಶುಭ ಹಾರೈಸಿ ರುತ್ತಾರೆ. ಪ್ರಾಸ್ತಾವಿಕ ನುಡಿಗಳನ್ನು ಶಿಬಿರಾಧಿಕಾರಿ ದಿವಾಕರ ಪೂಜಾರಿ ಮಾತನಾಡಿದ್ದು, ಉಪಸ್ಥಿತರಿದ್ದ ಎಲ್ಲರನ್ನೂ ಯೋಜನಾಧಿಕಾರಿ ಶಶಿಕಲಾ ಮೇಡಂ ಸ್ವಾಗತ ಮಾಡಿದ್ದು ಮೇಲ್ವಿಚಾರಕರಾದ ಪ್ರವೀಣ್ ಕುಮಾರ್ ಸರ್ ವಂದನಾರ್ಪಣೆ ಮಾಡಿರುತ್ತಾರೆ. ಸಮಾರಂಭದಲ್ಲಿ ಎಲ್ಲಾ ಸೇವಾ ಪ್ರತಿನಿಧಿಗಳು ಜನಜಾಗೃತಿ ವೇದಿಕೆ ಶಿಬಿರಾಧಿಕಾರಿ ನಾಗೇಂದ್ರ ಸರ್, ಆರೋಗ್ಯ ಸಹಾಯಕಿ ಜಯಲಕ್ಷ್ಮಿ, ಊರಿನ ಗಣ್ಯರು, ಪತ್ರಿಕಾ ಮಾಧ್ಯಮದವರು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.