ದ.ಕ. ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆಯುತ್ತಿರುವ 1575ನೇ ಮಧ್ಯವರ್ಜನ ಶಿಬಿರವನ್ನು ಗೌರವಾಧ್ಯಕ್ಷರಾದ ಧನ್ಯಕುಮಾರ್ ರೈ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪುತ್ತೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಮಹಾಬಲ ರೈ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಗೋಳಿ ತೊಟ್ಟು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜನಾರ್ಧನ್ ಗೌಡ ಪಟೇರಿ , ಉಪ್ಪಿನಂಗಡಿ ಆರಕ್ಷಕ ಅಧಿಕಾರಿ ರಾಜೇಶ್ ಕೆವಿ, ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ಸುಳ್ಯ ತಾಲೂಕು ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ವಿಮಲ ರಂಗಯ್ಯ, ಉದ್ಯಮಿಗಳಾದ ಮಹೇಂದ್ರವರ್ಮ ಜೈನ್ ಮೇಲೂರು, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷರಾದ ಭಾಸ್ಕರ್ ಗೌಡ ಇಜಲಂಪಾಡಿ, ಸಿದ್ಧಿ ವಿನಾಯಕ ಸೇವಾ ಸಮಿತಿ ಗೋಳಿ ತೊಟ್ಟು ಅಧ್ಯಕ್ಷರಾದ ಬಾಲಕೃಷ್ಣ ಅಲೆಕ್ಕಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಪ್ರಾಸ್ತಾ ವಿಕ ನುಡಿಗಳನ್ನು ವೇದಿಕೆ ಉಡುಪಿ ಪ್ರಾದೇಶಿಕ ಯೋಜನಾಧಿಕಾರಿಗಳಾದ ತಿಮ್ಮಯ್ಯನಾಯ್ಕ ಸರ್ ಅವರು ನೀಡಿರುತ್ತಾರೆ.
