ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಕೊಣ್ಣೂರು ವಲಯದ ಕಲ್ಲಾಪುರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ 1541 ನೇ ಮದ್ಯವರ್ಜನಾ ಶಿಬಿರವನ್ನು ಉದ್ಘಾಟನೆಗೊಳಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದ ಭವ್ಯವಾದ ವೇದಿಕೆಯಲ್ಲಿ ದಿವ್ಯ ಸಾನಿಧ್ಯವನ್ನು ಪ. ಪೂ. ಶ್ರೀ ಅಭಿನವ ಯಚ್ಚರ ಮಹಾಸ್ವಾಮಿಗಳು ಜಗದ್ಗುರು ಯಚ್ಚರಸ್ವಾಮಿಗಳ ಗವಿಮಠ ಶಿರೋಳ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಮಾದೇವಿ ಬಸವಣ್ಣೆಪ್ಪ ಸೊಬರದ್ ಅಧ್ಯಕ್ಷರು ಗ್ರಾಮ ಪಂಚಾಯತ್ ಶಿರೋಳ ಇವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಪರಮ ಪೂಜ್ಯರನ್ನು ಒಳಗೊಂಡಂತೆ ಸರ್ವ ಗಣ್ಯರು ನೆರವೇರಿಸಿದರು. ಪ್ರಾಸ್ತಾವಿಕವಾಗಿ ಶ್ರೀ ನಂದಕುಮಾರ್ ಸರ್ ಶಿಬಿರಾಧಿಕಾರಿ ಇವರು ಮಾತನಾಡಿ ಕ್ಷೇತ್ರದ ಹಿನ್ನಲೆ, ಜನಜಾಗೃತಿ ಕಾರ್ಯಕ್ರಮದ ರೂಪುರೇಷೆಗಳು ಹಾಗೂ ಶಿಬಿರದ ಕುರಿತು ತಿಳಿಸಿದರು. ದಿವ್ಯ ಸಾನಿಧ್ಯವನ್ನು ವಹಿಸಿದ್ದ ಪರಮ ಪೂಜ್ಯರು ಎಲ್ಲಾ ಶಿಬಿರಾರ್ಥಿಗಳಿಗೆ ಆಶೀರ್ವಚನ ನೀಡಿ ಸರ್ವರಿಗೂ ಶುಭ ಹಾರೈಸಿದರು. ವೇದಿಕೆಯಲ್ಲಿ ಮಾನ್ಯ ಶ್ರೀ ಪ್ರವೀಣ್ ಯಾವಗಲ್ ಯುವಧುರೀಣರು, 1541ನೇ ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಕಾಶಗೌಡ ತಿರುಕನಗೌಡ್ರು, ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ಕಲ್ಲಾಪುರದ ಅಧ್ಯಕ್ಷರಾದ ಶ್ರೀ ಯಲ್ಲಪ್ಪಗೌಡ ಶಿವಾಪುರ, ಶಿವಾನಂದ ಸೇಬಣ್ಣವರ್, ಶ್ರೀ ಕೊಟ್ರೇಶಿ ಕೊಟ್ರಶೆಟ್ಟಿ ಗ್ರಾ. ಪಂ. ಸದಸ್ಯರು,ಚನ್ನಯ್ಯ ಪರತ ದೇವರಮಠ, ಆರೋಗ್ಯ ಸಹಾಯಕರಾದ ಶ್ರೀಮತಿ ಫಿಲೋಮೀನಾ ಡಿ-ಸೋಜಾ ಮೇಡಂ,ಸ್ವಸಹಾಯ ಸಂಘದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಶಿಬಿರಾರ್ಥಿಗಳ ಪೋಷಕರು,ನವಜೀವನ ಸದಸ್ಯರು, ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ಜಗದೀಶ್ ಭಂಡಾರಿ ಸರ್ ಸರ್ವರನ್ನು ಸ್ವಾಗತಿಸಿದರು. ವಲಯದ ಮೇಲ್ವಿಚಾರಕರಾದ ಶ್ರೀ ಗುರುರಾಜ್ ಬೆಳಗಲಿ ಸರ್ವರಿಗೂ ವಂದಿಸಿದರು. ಜನಜಾಗೃತಿ ಮೇಲ್ವಿಚಾರಕರಾದ ಅವಿನಾಶ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಜನ ಜಾಗೃತಿ ಮೇಲ್ವಿಚಾರಕರಾದ ಅವಿನಾಶ್ ಕಾರ್ಯಕ್ರಮವನ್ನು ನಿರೂಪಿಸಿದರು.
