152 ನೇ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮೃತಿ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶ

Janajagurthi Vedike News

ಶಿಡ್ಲಘಟ್ಟ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಚಿಕ್ಕಬಳ್ಳಾಪುರ ಜಿಲ್ಲೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿಕ್ಕಬಳ್ಳಾಪುರ ಜಿಲ್ಲೆ, ಇವುಗಳ ವತಿಯಿಂದ ಶಿಡ್ಲಘಟ್ಟ ತಾಲೂಕಿನ SLV ಕನ್ವೆನ್ಷನ್ ಹಾಲ್ ನಲ್ಲಿ 152 ನೇ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮೃತಿ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಶ್ರೀ ಯಲುವಹಳ್ಳಿ ರಮೇಶರವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ವಿ. ಮುನಿಯಪ್ಪ ರವರು ನಡೆಸಿ ಗಾಂಧೀಜಿಯ ರಾಮರಾಜ್ಯದ ಕನಸನ್ನು ಧರ್ಮಸ್ಥಳದ ಪರಮಪೂಜ್ಯರಾದ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ ಅವರಿಗೆ ಮತ್ತು ಶ್ರೀಕ್ಷೇತ್ರಕ್ಕೆ ವಿಶೇಷವಾದ ಅಭಿನಂದನೆಗಳು ಎಂದು ಸಂತಸ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಸಮಿತಿ ಬೆಂಗಳೂರು ಇದರ ರಾಜ್ಯ ಸಂಸ್ಥಾಪಕರಾದ ಶ್ರೀ ಬೈರೇಗೌಡರವರು, ಪರಿಸರ ಪ್ರೇಮಿಗಳು ಗ್ರಾಮ ಪಂಚಾಯಿತಿ ಸದಸ್ಯರು ಸಂತೋಷ್ ಬೆಳ್ಳುಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿಜಯೇಂದ್ರ, ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ನರಸಿಂಹ ನಾಯ್ಡು, ಜಿಲ್ಲಾ ನಿರ್ದೇಶಕರಾದ ಪ್ರಶಾಂತ ಸಿ. ಎಸ್, ಜಿಲ್ಲಾ ಸದಸ್ಯರಾದ ಡಾ. ಕೆ. ಪ್ರಭಾ ನಾರಾಯಣಗೌಡ, ಎ.ಜಿ. ಸುಧಾಕರ್ ಸುಧಾಕರ್, ಸುರೇಶ್ ಹಿತ್ತಲಹಳ್ಳಿ, ತ್ಯಾಗರಾಜ್, ಎ. ಮೋಹನ್ , ಕೆ ಎಂ ನಾಗರಾಜ್, ಕುಪೇಂದ್ರಪ್ಪ, ವಿ ಮಂಜುನಾಥ್, ಮಾತನಾಡಿದರು.ಕಾರ್ಯಕ್ರಮದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಖಾವಂದರ ಹಾಗೂ ಕಾರ್ಯನಿರ್ವಾಹಕರ ನಿರ್ದೇಶಕರ ಸಂದೇಶವನ್ನು ತಿಳಿಸಲಾಯಿತು. ನವಜೀವನ ಸಮಿತಿಯ ಸದಸ್ಯರಾ ದೇವರಾಜ್, ಮೂರ್ತಿ, ಮುನಿಯಪ್ಪ ಸರೋಜಮ್ಮ ತಮ್ಮ ಅನುಭವ ಹಂಚಿಕೊಂಡರು. ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರದ ಸಾಧಕ ನವಜೀವನ ಸಮಿತಿಯ ಸದಸ್ಯರನ್ನು ಅಭಿನಂದಿಸಲಾಯಿತು. ಪ್ರಸ್ತಾವಿಕಮಾತಿನೊಂದಿಗೆ ಎಲ್ಲರನ್ನು ಬೆಂಗಳೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ಸ್ವಾಗತಿಸಿದರು. ಜಿಲ್ಲೆಯ ನವಜೀವನ ಸಮಿತಿ ಸದಸ್ಯರ ನವಜೀವನ ಪೋಷಕರು ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ನಿರ್ವಹಿಸಿದರು.