ಬೇಲೂರು ಯೋಜನಾ ವ್ಯಾಪ್ತಿಯ ಹಳೇಬೀಡಿನ ಮಹಾಸಂಸ್ಥಾನ ಪುಷ್ಪಗಿರಿ ಯಸಮುದಾಯ ಭವನದಲ್ಲಿ 1495ನೇ ಮದ್ಯವರ್ಜನ ಶಿಬಿರವು ಶ್ರೀ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು ಈ ಸಂದರ್ಭದಲ್ಲಿ ಪರಮ ಪೂಜ್ಯ ಸ್ವಾಮೀಜಿಗಳು ಮನುಷ್ಯನ ಜನ್ಮ ಬಹಳ ದೊಡ್ಡದು ಅದನ್ನು ತಪ್ಪುಗಳಿಂದ ತಿದ್ದಿಕೊಂಡು ಹಸನಾಗಿಸುವುದು ಮನುಷ್ಯನ ಧರ್ಮ ಎಂದು ಆಶೀರ್ವಚನ ನೀಡಿದರು ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ರಾಜಶೇಖರ ಎಸ್ ಎಚ್ ವಹಿಸಿದ್ದರು ಜಿಲ್ಲಾ ನಿರ್ದೇಶಕರಾದ ಜಯರಾಮ್, ಜಿಲ್ಲಾ ಜನಜಾಗೃತಿ ಅಧ್ಯಕ್ಷರಾದ ಅಣ್ಣಪ್ಪ ಶೆಟ್ಟಿ ಶಿಬಿರದ ಗೌರವಾಧ್ಯಕ್ಷರಾದ ಡಿ ಎಲ್ ಸೋಮಣ್ಣ ತಾಲ್ಲೂಕು ವೈದ್ಯಾಧಿಕಾರಿ ಗಳಾದ ಡಾ ಅನಿಲ್ ಕುಮಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಗೀತಾ ಅರುಣ್ ಯೋಜನಾಧಿಕಾರಿಗಳಾದ ಶ್ರೀಮತಿ ಸಂಧ್ಯಾ ಶೆಟ್ಟಿ, ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್ ,ಶಿಬಿರಾಧಿಕಾರಿ ನಾಗರಾಜ್, ಆರೋಗ್ಯ ಸಹಾಯಕಿ ಕುಮಾರಿ ರಂಜಿತಾ , ಮೇಲ್ವಿಚಾರಕಿ ಶ್ರೀಮತಿ ಸರೋಜಾ, ಸೇವಾ ಪ್ರತಿನಿಧಿಗಳು, ನವಜೀವನ ಪೋಷಕರು, ನವಜೀವನ ಸದಸ್ಯರು ಉಪಸ್ಥಿತರಿದ್ದರು. ದಾಖಲಾದ 70 ಮಂದಿ ಶಿಬಿರಾರ್ಥಿಗಳಲ್ಲಿ ಕೇವಲ 2ಮಂದಿ ಇತರ ತಾಲ್ಲೂಕಿನವರು ಆಗಿರುವುದು ವಿಶೇಷ.
