ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ 1361ನೇ ಮದ್ಯವರ್ಜನ ಶಿಬಿರವು ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಿಎಸ್ಐ ಪೊಲೀಸ್ ಇಲಾಖೆ ಮುಳುಬಾಗಿಲು ಶ್ರೀನಿವಾಸ್ ಎಂ ನೆರವೇರಿಸಿಕೊಟ್ಟರು ಅಧ್ಯಕ್ಷತೆಯನ್ನು ಶ್ರೀ ರವೀಂದ್ರ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ವಹಿಸಿದ್ದರು. ಜಿಲ್ಲಾಧ್ಯಕ್ಷರು ಲಕ್ಷ್ಮಣಗೌಡ ಜಿಲ್ಲಾ ನಿರ್ದೇಶಕರು ಚಂದ್ರಶೇಖರ ಜೆ, ಯೋಜನಾಧಿಕಾರಿಗಳು ಸಂಧ್ಯಾ,ಜನಜಾಗೃತಿ ವೇದಿಕೆಯ ಬೆಂಗಳೂರು ಪ್ರಾದೇಶಿಕ ಯೋಜನಾಧಿಕಾರಿ ಶ್ರೀ ಗಣೇಶ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.