ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ದಿನಾಂಕ 17 .02 .2020 ರಂದು ಟ್ರಸ್ಟ್ ಆಗಿ ನೋಂದಾವಣೆಯಾಗಿದ್ದು ಇದರ ಸಭೆಯು ಪೂಜ್ಯರ ಅಧ್ಯಕ್ಷತೆಯಲ್ಲಿ ದಿನಾಂಕ 06 .03 .2021 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ನಡೆಸಲಾಯಿತು. ಟ್ರಸ್ಟಿಗಳಾದ ಮಾತೃಶ್ರೀ ಅಮ್ಮನವರು ಟ್ರಸ್ಟ್ ಕಾರ್ಯ ಚಟುವಟಿಕೆಗಳಿಗೆ ಉಪಯುಕ್ತ ಸಲಹೆ ಸೂಚನೆ ನೀಡಿದರು. ಗೌರವಾನ್ವಿತ ಟ್ರಸ್ಟಿಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ || ಎಲ್.ಹೆಚ್ ಮಂಜುನಾಥ್ , ಮನೋ ವೈದ್ಯರಾದ ಡಾ || ಪಿ. ವಿ ಭಂಡಾರಿ , ಡಾ || ಶ್ರೀನಿವಾಸ್ ಭಟ್ , ಜನಜಾಗೃತಿ ರಾಜ್ಯಾಧ್ಯಕ್ಷರಾದ ಶ್ರೀಮಾನ್ ವಿ . ರಾಮಸ್ವಾಮಿ ರವರು ಸಭೆಯಲ್ಲಿ ಉಪಸ್ಥಿತರಿದ್ದರು. ಉಪಯುಕ್ತ ಸಲಹೆ ಸೂಚನೆ ನೀಡಿದರು. ಪೂಜ್ಯರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಹಲವಾರು ಹೊಸ ಚಿಂತನೆಗಳ ಬಗ್ಗೆ ವಿಚಾರ ವಿಮರ್ಶೆ ನಡೆಸಲಾಯಿತು .
