ಹೊಸಪೇಟೆ ಜಿಲ್ಲಾ ಯೋಜನೆ ವ್ಯಾಪ್ತಿಯ ಹೊಸಪೇಟೆ ತಾಲೂಕಿನ ಶ್ರೀ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ 1724ನೇ ಮಧ್ಯವರ್ಜನ ಶಿಬಿರದ ಕುಟುಂಬ ದಿನ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮ

Janajagurthi Vedike News

ಹೊಸಪೇಟೆ ಜಿಲ್ಲಾ ಯೋಜನೆ ವ್ಯಾಪ್ತಿಯ ಹೊಸಪೇಟೆ ತಾಲೂಕಿನ ಶ್ರೀ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಇಂದು 1724ನೇ ಮಧ್ಯವರ್ಜನ ಶಿಬಿರದ ಕುಟುಂಬ ದಿನ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಸಲಾಯಿತು.ಸಮಾರೋಪ ಸಮಾರಂಭದಲ್ಲಿ ಶ್ರೀ ಶ್ರೀ ಶ್ರೀ ಪೂರ್ಣಾನಂದ ಭಾರತಿ ಮಾತಂಗಿ ಸ್ವಾಮಿಗಳು ಮಾತಂಗ ಮಹರ್ಷಿ ಆಶ್ರಮ ಹಂಪಿ ರವರು ದಿವ್ಯ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ವಿ.ಎಸ್ ಉಗ್ರಪ್ಪ ಮಾಜಿ ಸಂಸದರು, ಶ್ರೀ ರಾಜಣ್ಣ ಕೊರವಿ ಜನಜಾಗೃತಿ ರಾಜ್ಯಾಧ್ಯಕ್ಷರು, ಶ್ರೀ ಗಣೇಶ್. ಬಿ. ಪ್ರಾದೇಶಿಕ ನಿರ್ದೇಶಕರು, ಶ್ರೀ ಕೆ ಮಹೇಶ್ ಕುಮಾರ್ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಶ್ರೀ ಸತೀಶ್ ಶೆಟ್ಟಿ ನಿರ್ದೇಶಕರು, ಶ್ರೀ ನಟರಾಜ್ ಬಾದಾಮಿ, ಶ್ರೀ ಪರಶುರಾಮ್, ಮೊದಲಾದ ಗಣ್ಯರು ಉಪಸ್ಥಿರಿದ್ದರು. ವಿ.ಎಸ್ ಉಗ್ರಪ್ಪ ಮಾಜಿ ಸಂಸದರು ಮಾತನಾಡುತ್ತಾ ಕುಡಿತ ಜೂಜು ಇನ್ನಿತರ ಕೆಟ್ಟ ವ್ಯಾಮೋಹ ಇದು ಯಾವ ರೂಪದಲ್ಲಿ ಯಾರ್ಯಾರಲ್ಲಿರುವುದೋ ಅವರ ಕುಟುಂಬ ಸಾಧನೆ ಮಾಡಲು ಸಾಧ್ಯವಿಲ್ಲ, ಕುಡಿತ ಮಾಡುವ ವ್ಯಕ್ತಿಯು ಕುಟುಂಬದ ಮಕ್ಕಳ ಭವಿಷ್ಯದ ಮೇಲೆ ತಂದೆಯೇ ಚಪ್ಪಡಿ ಕಲ್ಲು ಹಾಕಿ ನಾಶ ಮಾಡಿದ ಹಾಗೆ ಆಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಗಣೇಶ್ ಬಿ. ಮಾತನಾಡುತ್ತಾ ಹೋರಾಟ ಮಾಡಿದರೆ ಜಯಸಲಿಕ್ಕೆ ಆಗುವುದಿಲ್ಲ ವ್ಯಸನಿಗಳ ಮನಸ್ಸು ಪರಿವರ್ತನೆ ಮಾಡಿದರೆ ಜಯಸಲಿಕ್ಕೆ ಸಾಧ್ಯ ಎಂದು ಅನಿಸಿದಾಗ ಶಿಬಿರ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಧರ್ಮಸ್ಥಳದ ಮೂಲಕವೇ ಪೂರ್ಣಪ್ರಮಾಣದ ಖರ್ಚು ವೆಚ್ಚ ಮಾಡಿ ಶಿಬಿರ ನಡೆಸಲಾಗುತ್ತಿತ್ತು ಆದರೆ ಪ್ರಸ್ತುತ ಊರಿನವರ ಸಹಕಾರ ಮತ್ತು ಬದ್ಧತೆಯ ಕಾರಣಕ್ಕಾಗಿ ಊರಿನವರ ಸಹಕಾರದಿಂದ ಶಿಬಿರ ಮಾಡಲಾಗುತ್ತಿದೆ. ಒಂದು ಬಿಳಿ ಬಟ್ಟೆಯ ಮೇಲೆ ಕಪ್ಪು ಚುಕ್ಕಿ ಇದ್ದರೆ ಅಸಹ್ಯವಾಗಿ ಕಾಣುತ್ತದೆ, ಹಾಗೆ ನಿಮ್ಮ ಜೀವನದಲ್ಲಿ ದುಶ್ಚಟ ಕಪ್ಪು ಚುಕ್ಕೆಯಾಗಿದೆ ಅದನ್ನು ಬಿಟ್ಟು ಪರಿಶುದ್ಧರಾಗಬೇಕು.ಮದುವೆ ರೀತಿಯಲ್ಲಿ ಈ ದಿನದ ಕಾರ್ಯಕ್ರಮ ನಡೆದಿದೆ, ಈ ಶಿಬಿರದ ಮೂಲಕ ಹೊಸ ಜೀವನ ನಡೆಸಬೇಕು. ಗಾಂಧೀಜಿ ಬೆಂಕಿ ದೇಹವನ್ನು ಸುಟ್ಟರೆ ಮದ್ಯಪಾನ ದೇಹ ಮತ್ತು ಆತ್ಮವನ್ನು ಸುಡುತ್ತದೆ. ಕ್ಷಣಿಕ ಸುಖಕ್ಕಾಗಿ ಅಭ್ಯಾಸ ಮಾಡಿಕೊಂಡಿದ್ದೀರಿ or ಸಹವಾಸ ದೋಷ-ಕುತೂಹಲಕ್ಕಾಗಿ ಈ ಚಟಕ್ಕೆ ಬಲಿಯಾಗಿದ್ದೀರಿ, ಇದರಿಂದ ಹೊರಗೆ ಬಂದು ಪರಿಶುದ್ಧ ಜೀವನ ನಡೆಸಿರಿ. ದುಷ್ಟ ಕೆಟ್ಟದ್ದು ಅದನ್ನು ನಿಮಗೆ ತೋರಿಸಿಕೊಟ್ಟು ನಿಮ್ಮಲ್ಲಿ ಅರಿವು ಮೂಡಿಸುವುದೇ ಶಿಬಿರದ ಉದ್ದೇಶ. ಒಂದು ಬಳ್ಳಿ ಮರವನ್ನ ಅಪ್ಪಿಕೊಂಡು ಬೆಳೆಯುತ್ತೆ ಹಾಗೆ ಮುಂದೆ ಆ ಮರವನ್ನು ಸಾಯುವುದಕ್ಕೆ ಕಾರಣವಾಗುತ್ತದೆ, ಹಾಗೆ ದುಶ್ಚಟಗಳು ನಿಮಗೆ ಅಂಟಿಕೊಂಡರೆ ಸರ್ವನಾಶ ಖಚಿತ ಎಂದು ತಿಳಿಸಿದರು. ಶಿಬಿರದ ಮೂಲಕ 70 ಮಂದಿ ವ್ಯಸನ ಮುಕ್ತರಾಗಿ ಹೊಸ ಜೀವನ ನಡೆಸಲು ಸಹಕಾರಿಯಾಯಿತು.