ಹೊಸಪೇಟೆ ಜಿಲ್ಲಾ ಜನಜಾಗೃತಿ ವೇದಿಕೆ ಸಭೆಯನ್ನು ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಗಣೇಶ್ ಬಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ನಟರಾಜ್ ಬಾದಾಮಿ, ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿ, ಶ್ರೀ ಪರಶುರಾಮ್ ರವರ ಉಪಸ್ಥಿತಿಯಲ್ಲಿ ನಡೆಸಲಾಯಿತು. ಹಿಂದಿನ ಸಭೆಯ ನಡವಳಿಕೆಯ ವಿಮರ್ಶೆ, ವರದಿ ವರ್ಷದ ಜನಜಾಗೃತಿ ಕಾರ್ಯಕ್ರಮಗಳ ಸಾಧನ ವಿಮರ್ಶೆ, ಜಿಲ್ಲಾ ಜನಜಾಗೃತಿಯ ಖಾತೆ ಬದಲಾವಣೆಯ ಬಗ್ಗೆ, 2024/25 ರ ಮೊದಲ ತ್ರೈಮಾಸಿಕ ಅವಧಿಯ ಮಧ್ಯವರ್ಜನ ಶಿಬಿರದ ಬಗ್ಗೆ, ನವಜೀವನೋತ್ಸವ ಕಾರ್ಯಕ್ರಮ, ಸಂಪೂರ್ಣ ಸುರಕ್ಷಾ ಕಾರ್ಯಕ್ರಮ, ಜನಜಾಗೃತಿ ಪದಾಧಿಕಾರಿಗಳ ಬದಲಾವಣೆಯ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ಕೆ ಕಾವಲಿ ಶಿವಪ್ಪ ನಾಯಕ್, ಶ್ರೀಮತಿ ಶಿಲ್ಪಕಲಾ ಉಪಾಧ್ಯಕ್ಷರಾಗಿ, ಶ್ರೀ ಪ್ರಕಾಶರವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.
