ಹೊನ್ನಾಳಿ ತಾಲೂಕಿನ ತಾಲೂಕು ಮಟ್ಟದ ನವಜೀವನೋತ್ಸವ ಕಾರ್ಯಕ್ರಮ ಜಿಲ್ಲಾ ಜನ ಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಸುರೇಶ್ ಹೊಸ್ಕೇರಿ ಅವರ ಅಧ್ಯಕ್ಷತೆಯಲ್ಲಿ ಹಿರೇಕಲ್ ಮಠ ಆವರಣದಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಾಯಸ್ ಉದ್ಘಾಟನೆಯನ್ನು ಮಾಡಿ ನವ ಜೀವನ ಸಮಿತಿ ಸದಸ್ಯರಿಗೆ ನವ ಜೀವನದ ಸಂದೇಶವನ್ನು ಮತ್ತು ಕ್ಷೇತ್ರದ ಸಂದೇಶವನ್ನು ನೀಡಿದರು. ಪರಮಪೂಜ್ಯ ಖಾವಂದರು ಕೈಗೊಂಡ ಸಾಮಾಜಿಕ ಕಾರ್ಯಗಳು, ವ್ಯಕ್ತಿ ಮತ್ತು ಸಮಾಜದ ಬದಲಾವಣೆ, ಜನಜಾಗ್ರತಿ ವೇದಿಕೆಯನ್ನ ಸ್ಥಾಪನೆಯನ್ನ ಮಾಡಿ ಶಿಬಿರಗಳ ಮೂಲಕ ಲಕ್ಷಾಂತರ ಕುಟುಂಬಗಳು ಇವತ್ತು ನೆಮ್ಮದಿಯ ಬದುಕನ್ನು ಸಾಗಿಸುತ್ತಿದೆ. ಪೂಜ್ಯರ ಮತ್ತು ಅಮ್ಮನವರ ಈ ಸಾಮಾಜಿಕ ಸೇವೆ ಜನರನ್ನ ಅಭಿವೃದ್ಧಿಯತ್ತ ಸಾಗಿಸುವಂತೆ ಪ್ರೇರಣೆಯಾಗಿದೆ. ನವ ಜೀವನ ಬಲವರ್ಧನೆಗೆ ಪೋಷಕರ ಪಾತ್ರ ನವ ಜೀವನ ಸಮಿತಿಯ ಕಾರ್ಯವೈಕರಿ, ನವಜೀವನ ಸದಸ್ಯರ ಸಾಮಾಜಿಕ ಚಟುವಟಿಕೆಗಳು, ಮನೆ ಬೇಟಿಯ ಪರಿಣಾಮ, ಸ್ವಉದ್ಯೋಗ, ಜಾಗೃತಿ ಕಾರ್ಯಕ್ರಮಗಳು ಕೌಟುಂಬಿಕ ಜೀವನ, ಮಕ್ಕಳ ಲಾಲನೆ ಪೋಷಣೆ, ಗ್ರಾಮದ ಸಮಗ್ರ ಅಭಿವೃದ್ಧಿ, ಪಾನಮುಕ್ತ ಗ್ರಾಮ ಮತ್ತು ವೈಯಕ್ತಿಕ ಅಭಿವೃದ್ಧಿಯ ಬಗ್ಗೆ ತಿಳಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಕಾರ್ಯವೈಕರಿ, ಜನಜಾಗೃತಿ ವೇದಿಕೆಯ ಚಟುವಟಿಕೆಗಳು, ಜಾಗೃತಿ ಅಣ್ಣ ಜಾಗೃತಿ ಮಿತ್ರ ಪ್ರಶಸ್ತಿಗಳು, ಜಿಲ್ಲಾ ವೇದಿಕೆ ಸದಸ್ಯರ ಪಾನಮುಕ್ತ ಸಂಘಟನೆಯಲ್ಲಿ ಜವಾಬ್ದಾರಿಗಳು ಬಗ್ಗೆ ನಿದರ್ಶನಗಳೊಂದಿಗೆ ಉದಾಹರಣೆಗಳೊಂದಿಗೆ ಮಾರ್ಗದರ್ಶನ ನೀಡಿದರು. ಪಾನಮುಕ್ತ ಸಂಘಟನೆ ಮಾಸಿಕ ಸಭೆ, ನಿರಂತರ ಅನು ಪಾಲನೆಯ ಬಗ್ಗೆ ತಿಳಿಸುತ್ತಾ ಸ್ವಇಚ್ಛೆಯಿಂದ ಪಾನಮುಕ್ತರಾದ ಕಂಕನಹಳ್ಳಿ ಗ್ರಾಮದ ಆರು ಜನ ಸದಸ್ಯರನ್ನು ವೇದಿಕೆಯಲ್ಲಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ನವಜೀವನ ಸದಸ್ಯರು ದಂಪತಿ ಸಮೇತ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಲಿಂಗರಾಜ್ ಹವಳದ, ನಟರಾಜ್, ಕತ್ತಿಗೆ ರಮೇಶ್, ಬಿ ಎಲ್ ಕುಮಾರಸ್ವಾಮಿ, ಪದ್ಮರಾಜ್ ಜೈನ್, ವೈಟಿ ಮಲ್ಲಿಕಾರ್ಜುನ, ಮಂಜುನಾಥ ಪಾಟೀಲ್, ಪ್ರಕಾಶ್ ಜಿಗಳಿ ಇನ್ನಿತರರು ಭಾಗವಹಿಸಿದರು. ಜಿಲ್ಲಾ ನಿರ್ದೇಶಕರಾದ ಲಕ್ಷ್ಮಣ್ ಎಂ, ತಾಲೂಕ್ ಯೋಜನಾಧಿಕಾರಿಗಳು, ಜನಜಾಗೃತಿ ಯೋಜನಾಧಿಕಾರಿಗಳು ನವಜೀವನ ಪೋಷಕರು ಉಪಸ್ಥಿತರಿದ್ದರು, ಕತ್ತಿಗೆ ರಮೇಶ್ ತನ್ನ ಬದಲಾದ ಜೀವನದ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಯೋಜನಾಧಿಕಾರಿ ಬಾಬು ವಂದಿಸಿದರು. ಜನಜಾಗೃತಿ ವೇದಿಕೆಯ ಆರೋಗ್ಯ ಸಹಾಯಕರಾದ ಶ್ರೀಮತಿ ಸೌಮ್ಯ ಮನೆ ಭೇಟಿಯ ಮೂಲಕ ಸಂಘಟನೆಯನ್ನು ಮಾಡಿದರು.
