ಪರಮಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ, ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಹುಮ್ನಾಬಾದ್ ತಾಲೂಕು ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಹುಮ್ನಾಬಾದ್ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೀದರ್ ಜಿಲ್ಲೆ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಮಾರ್ಗದರ್ಶನದೊಂದಿಗೆ ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ, ಹುಮ್ನಾಬಾದ್ ಬಿ ವಲಯದ ಪುರಸಭೆ, ಹುಮ್ನಾಬಾದ್ ತಾಲೂಕು ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ದಾನಿಗಳ ಸಹಾಯದೊಂದಿಗೆ 1806 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಶ್ರೀ ರಾಜೇಶ್ವರ ಶಿವಾಚಾರ್ಯರು (ಕಟ್ಟಿಮನಿ ಸಂಸ್ಥಾನ ಹಿರೇಮಠ್ ಮೇಕರ್ ತಡೋಳ). ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಡಾ. ಸಿದ್ದಲಿಂಗಪ್ಪ ಪಾಟೀಲ್ (ಜನಪ್ರಿಯ ಶಾಸಕರು, ಹುಮ್ನಾಬಾದ್ ಮತಕ್ಷೇತ್ರ) ರವರು ನೆರವೇರಿಸಿದರು.ಕಾರ್ಯಕ್ರಮದ ಅದ್ಯಕ್ಷತೆಯನ್ನು ಶ್ರೀ ವಿರುಪಾಕ್ಷ ಗಾದಗಿ (ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಬೀದರ್ ಜಿಲ್ಲೆ) ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಎಸ್ ಚಿದ್ರಿ (ಕರ್ನಾಟಕ ಆರ್ಯ ಪ್ರತಿನಿಧಿ ಸಭಾ ಉಪಾಧ್ಯಕ್ಷರು ಹುಮ್ನಾಬಾದ್ ಆರ್ಯ ಸಮಾಜದ ಅಧ್ಯಕ್ಷರು), ಬೀದರ್ ಜಿಲ್ಲಾ ನಿರ್ದೇಶಕರು ಶ್ರೀ ಪ್ರವೀಣ್ ಕುಮಾರ್, ಕರ್ನಾಟಕ ನಿಗಮ ಮಂಡಳಿಯ ರಾಜ್ಯ ಅಧ್ಯಕ್ಷರು ಶ್ರೀ ಬಸವರಾಜ್ ಆರ್ಯ, ಶ್ರೀ ವೆಂಕಟ ಜಾದವ್, ಶ್ರೀ ಡಾಕ್ಟರ್ ಹಸನ್ ಹಳ್ಳಿಖೇಡ ಬಿ., ಹುಮ್ನಾಬಾದ್ ತಾಲೂಕು ಯೋಜನಾಧಿಕಾರಿ ಶ್ರೀ ವೀರೇಶ, ಬಾಲ್ಕಿ ತಾಲೂಕು ಯೋಜನಾಧಿಕಾರಿ ಶ್ರೀ ಸುಬ್ರಹ್ಮಣ್ಯ ಆಚಾರ್ಯ, ಕಲ್ಬುರ್ಗಿ ಜನಜಾಗೃತಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಶ್ರೀ ರಾಜೇಶ್ ಕೆ., ಶಿಬಿರಾಧಿಕಾರಿ ಶ್ರೀ ವಿದ್ಯಾದರ್, ಶ್ರೀ ಮಲ್ಲೇಶಪ್ಪ ಕೆ. ಜನಜಾಗೃತಿ ಮೇಲ್ವಿಚಾರಕರು ಪ್ರಾದೇಶಿಕ ವಿಭಾಗ ಕಲಬುರ್ಗಿ, ಶ್ರೀ ಮಲ್ಲಯ್ಯ ಮಠ ವಲಯದ ಮೇಲ್ವಿಚಾರಕರು, ಹುಮ್ನಾಬಾದ್ ಊರಿನ ಗಣ್ಯವ್ಯಕ್ತಿಗಳು, ಸ್ವ ಸಹಾಯ ಸಂಘದ ಸದಸ್ಯರು, ವಲಯದ ಸೇವಾಪ್ರತಿನಿಧಿಗಳು, ನವಜೀವನ ಸಮಿತಿಯ ಸದಸ್ಯರು, ಜ್ಞಾನವಿಕಾಸ ಸಮನ್ವಯಾಧಿಕಾರಿಗಳು ಉಪಸ್ಥಿತರಿದ್ದರು.
