ಹುಣಸೂರು ತಾಲೂಕಿನ ಗುರುಬೂದಿಸ್ವಾಮಿ ಮಂಗಳ ಮಂಟಪ ಸಭಾಂಗಣದಲ್ಲಿ ಗಾಂಧಿಜಯಂತಿ ಪ್ರಯುಕ್ತ ನವಜೀವನೋತ್ಸವ ಕಾರ್ಯಕ್ರಮ ವು ಜರುಗಿತು.ಉಕ್ಕಿನಕಂತೆ ಮಠ, ಮಾದಹಳ್ಳಿಯ ಪೂಜ್ಯ ಶ್ರೀ ಶ್ರೀ ಸಾಂಬಸದಾಶಿವಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಹುಣಸೂರು ತಾಲೂಕಿನ ಮಾನ್ಯ ಶಾಸಕರಾದ ಶ್ರೀ ಹೆಚ್. ಪಿ. ಮಂಜುನಾಥ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.ಮೈಸೂರು ಪ್ರಾದೇಶಿಕ ವಿಭಾಗದ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಪಿ ಗಂಗಾಧರ್ ರೈರವರು ನವಜೀವನ ಸದಸ್ಯರನ್ನು ಅಭಿನಂದಿಸಿ, ಆಶಯ ಭಾಷಣ ಮಾಡಿದರು.ಮೈಸೂರು ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಶ್ರೀ ಹಂದನಹಳ್ಳಿ ಸೋಮಶೇಖರ್ ರವರು ಅಧ್ಯಕ್ಷತೆ ವಹಿಸಿದ್ದರು.ನಗರ ಸಭೆ ಅಧ್ಯಕ್ಷರಾದ ಶ್ರೀ ದೇವ ನಾಯಕ, ಹುಣಸೂರು ಪೊಲೀಸ್ ಅಧೀಕ್ಷಕರಾದ ಶ್ರೀ ಪಿ. ರವಿ ಪ್ರಸಾದ್ ರವರು ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ನಿರ್ದೇಶಕರಾದ ಶ್ರೀ. ಹೆಚ್. ಮುರಳೀಧರ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಟ್ಟು 500 ಮಂದಿ ಭಾಗವಹಿಸಿದ್ದರು.
