ಹುಕ್ಕೇರಿ -1972ನೇ ಮದ್ಯ ವರ್ಜನ ಶಿಬಿರದ ಉದ್ಘಾಟನೆ.

Janajagurthi Vedike Uncategorized

ಹುಕ್ಕೇರಿ ತಾಲ್ಲೂಕಿನ ಬಸ್ತವಾಡ ಗ್ರಾಮದ ಶ್ರೀಕಾಡ ಸಿದ್ಧೇಶ್ವರ ದೇವಸ್ಥಾನದ ಸಭಾಭವನದಲ್ಲಿ, ಇಂದು 1972 ನೇ ಮದ್ಯವರ್ಜನ ಶಿಬಿರ ಪ್ರಾರಂಭವಾಯಿತು.ಶಿಬಿರದ ಉದ್ಘಾಟನೆಯನ್ನು ಹುಕ್ಕೇರಿ ಹಿರೇಮಠದ ಪರಮ ಪೂಜ್ಯ ಶ್ರೀ ಶ. ಬ್ರ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ಜನಜಾಗೃತಿ ಯೋಜನಾಧಿಕಾರಿ ಶ್ರೀ ಭಾಸ್ಕರ್ ಪ್ರಾಸ್ತವಿಕ ನುಡಿಗಳನ್ನಾಡಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪರಮಪೂಜ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಹಸಿದವರಿಗೆ ಅನ್ನ ನೀಡುವ, ಅನಾರೋಗ್ಯದಿಂದ ಬಳಲಿದವರಿಗೆ ಔಷಧ ನೀಡುವ, ವಸ್ತ್ರ ದಾನ ಮಾಡುವ, ಸಹಾಯ ಕೇಳಿ ಬಂದವರಿಗೆ ಅಭಯ ನೀಡುವ ದೇಶದ ಶ್ರದ್ಧಾ ಧಾರ್ಮಿಕ ಕೇಂದ್ರ ಎಂದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ, ಪರಂಪರೆಯಂತೆ ಅದರ ಎಲ್ಲ ಧರ್ಮಾಧಿಕಾರಿಗಳು, ಧರ್ಮದೇವತೆಗಳ ಆದೇಶದಂತೆ ಕರ್ತವ್ಯ
ನಿರ್ವಹಿಸುತ್ತಾ ಬಂದಿದ್ದಾರೆ, ಅದರಂತೆ ಪರಮ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಅದನ್ನು ಉಳಿಸಿಕೊಂಡು,ಬೆಳೆಸಿಕೊಂಡು ಸಮಾಜದ ಏಳ್ಗೆಗೆ ತಮ್ಮನ್ನು ತಾವು ತೊಡಗಿಸಿಕೊಂಡು, ಇಡೀ ಮನಕುಲಕ್ಕೆ ಮಾದರಿಯಾಗಿದ್ದಾರೆ ಎಂದರು.ಸಭೆಯಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀ ದಾವಲಸಾಬ್ ಬಾಡ್ಕರ್,1972ನೇ ಮದ್ಯ ವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಅಶೋಕ್ ಪಾಟೀಲ, ಶ್ರೀ ಸುರೇಶ್ ವಂಟಮೂರಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ಬಸವರಾಜ್ ನಾಯಕ್, ಬಾಹುಬಲಿ ನಾಗನೂರಿ, ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷರಾದ ಶ್ರೀ ಪಿ ಜಿ ಕೊಣ್ಣೂರು, ಸದಸ್ಯರಾದ ಶ್ರೀ ನಿಂಗಪ್ಪ ಬಡಿಗೇರ, ಶ್ರೀ ಗುರುನಾಥ್ ಕಡೇಲಿ, ಶಿರಾಜ್ ಸನದಿ, ಇರ್ಪನ ಬೇಗ ಇನಾಮದಾರ, ತಾಲೂಕಿನ ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರು, ಶಿಬಿರಾಧಿಕಾರಿ, ಆರೋಗ್ಯ ಸಹಾಯಕರು, ಜನಜಾಗೃತಿ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ನವ ಜೀವನ ಸದಸ್ಯರು ಉಪಸ್ಥಿತರಿದ್ದರು.ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಶ್ರೀ ಶ್ರೀಕಾಂತ್ ನಾಯಕ್ ಸರ್ವರನ್ನು ಸ್ವಾಗತಿಸಿದರು, ಶಿಬಿರದ ಜೊತೆ ಕಾರ್ಯದರ್ಶಿ ಶ್ರೀ ಮಂಜುಳಾ ವಂದಿಸಿದರು, ಮೇಲ್ವಿಚಾರಕ ಹನುಮಂತ ಕಾರ್ಯಕ್ರಮವನ್ನು ನಿರೂಪಿಸಿದರು.