ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ವಿ ಎಮ್ ಕತ್ತಿ ಮಹಾವಿದ್ಯಾಲಯದಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ

Janajagurthi Vedike News

ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ವಲಯದ ಬೆಲ್ಲದ ಬಾಗೇವಾಡಿ ವಿ ಎಮ್ ಕತ್ತಿ ಮಹಾವಿದ್ಯಾಲಯದಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಡಾ| ವಿ. ಎಸ್. ಹೂಗಾರ ಪ್ರಾಂಶುಪಾಲರು ವಿ ಎಂ ಕತ್ತಿ ಮಹಾವಿದ್ಯಾಲಯ ಬೆಲ್ಲದ ಬಾಗೇವಾಡಿ ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಮಹಾದೇವಿ ಮಾಳ್ಗೆ ಒಕ್ಕೂಟ ಅಧ್ಯಕ್ಷರು ಬೆಲ್ಲದ ಬಾಗೇವಾಡಿ ಇವರು ವಹಿಸಿಕೊಂಡರು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊಫೆಸರ್ ಪಿ. ಜಿ. ಕೊನ್ನೂರ್ ಜನಜಾಗೃತಿ ವೇದಿಕೆ ಉಪಾಧ್ಯಕ್ಷರು ಚಿಕ್ಕೋಡಿ ಜಿಲ್ಲೆ, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಶ್ರೀ ವಿಠಲ್ ಸಾಲ್ಯಾನ್, ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ಶ್ರೀಕಾಂತ್ ನಾಯಕ್ ಮತ್ತು 120 ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾನ್ಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರು ಮಾತನಾಡಿ ಭಾರತ ದೇಶ ಅಭಿವೃದ್ಧಿಯತ್ತ ಸಾಗಬೇಕಾದರೆ ಯುವ ಪೀಳಿಗೆ ಮಾದಕ ವಸ್ತುಗಳಿಂದ ಮುಕ್ತರಾಗಬೇಕು ಎಂದು ಮಾಹಿತಿ ನೀಡಿದರು.