ಹತ್ತು ಮನಸುಗಳು ಒಟ್ಟು ಸೇರಿ ಹಿರೇಬಾಗೇವಾಡಿ ತಾಲೂಕಿನಲ್ಲಿ ನಡೆದ 1726 ನೇ ಮಧ್ಯವರ್ಜನ ಶಿಬಿರದ ಸಮಾರೋಪಗೊಂಡಿತು.ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಶಿವಯೋಗಿ ಸದ್ಗುರು ನಾಗೇಂದ್ರ ಮಹಾಸ್ವಾಮಿಗಳು ಶ್ರೀ ಪಾವನ ಕ್ಷೇತ್ರ ಬಡ್ಡೆಕೊಳ್ಳ ಮಠರವರು ಚಿತ್ತೈಸಿ ನವ ಜೀವನ ಕುಟುಂಬದವರಿಗೆ,ನೆರೆದ ಸಭಿಕರಿಗೆ ಆಶೀರ್ವಚನ ನೀಡಿ ಆಶೀರ್ವದಿಸಿದರು.ಅಧ್ಯಕ್ಷತೆಯನ್ನು ಶ್ರೀ ಚಂದ್ರಪ್ಪ ಬಸಪ್ಪ ಸಿಂತ್ರಿ .ಶ್ರೀ ಈರಣ್ಣ ಅರಳಿಕಟ್ಟಿ ಗೌರವಾಧ್ಯಕ್ಷರು ಮುಖ್ಯ ಅತಿಥಿಗಳು ಶ್ರೀ ರಾಜಣ್ಣ ಮು ಕೊರವಿ ರಾಜ್ಯಾಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಧರ್ಮಸ್ಥಳ.ಶ್ರೀಮತಿ ಸ್ಮಿತಾ ರಾಜು ಪಾಟೀಲ್ ಅಧ್ಯಕ್ಷರು ಗ್ರಾ ಪಂ ಹಿರೇಬಾಗವಾಡಿ.ಶ್ರೀ ಬಸವರಾಜ್ ಸೊಪ್ಪಿಮಠ ಅಧ್ಯಕ್ಷರು ಜಿ ಜ ವೇ ಬೆಳಗಾವಿ ಸತೀಶ್ ನಾಯಕ್ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇ ಧ ಗ್ರಾ ಯೋ, ಬಿಸಿ ಟ್ರಸ್ಟ್ ರಿ ಬೆಳಗಾವಿ.ಜಿ ಜ ವೇ ಸದಸ್ಯರು. ಶ್ರೀಮತಿ ಪುಷ್ಪ ನಾಯಕರ ಗ್ರಾ ಪಂ ಉಪಾಧ್ಯಕ್ಷರು. ಶ್ರೀ ಶಂಕರಗೌಡ ಪಾಟೀಲ್ ಜಿ ಪಂ ಸದಸ್ಯರು ಹಾಗೂ ಜಿಲ್ಲಾ ಜ ವೇ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ನೆರವೇರಿಸಿದರು.ಸಮಾರೋಪ ಕಾರ್ಯಕ್ರಮಕ್ಕೆ ಮುಂಚೆ ಕುಟುಂಬ ದಿನ ಕಾರ್ಯಕ್ರಮವನ್ನು ಧಾರವಾಡ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಭಾಸ್ಕರ್ ರವರು ನಿರ್ವಹಿಸಿಕೊಟ್ಟರು.
ಜನಮಂಗಳ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವೀಲ್ ಚೇರ್. ವಾಕರ್. ಹ್ಯಾಂಡಸ್ಟಿಕ್ ವಿತರಣೆ ಮಾಡಿದರು.ಮಾಜಿ ಸೈನಿಕರು ಜಿಲ್ಲಾ ಜ.ಸದಸ್ಯರು. ತಾಲೂಕು ಯೋಜನಾಧಿಕಾರಿ ಯೋಗೇಶ್ ಕುಮಾರ್ ರವರು, ಶಿಬಿರಾಧಿಕಾರಿ ರಾಜೇಶ್, ಮೇಲ್ವಿಚಾರಕರಾದ ಶ್ರೀಮತಿ ಗಂಗಾ, ಉಮೇಶ್, ನವಜೀವನ ಪೋಷಕರು, ನವ ಜೀವನ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಸಂಘದ ಸದಸ್ಯರು ಉಪಸ್ಥಿತರಿದ್ದರು.
