ಹಿರೇ ಬಾಗೇವಾಡಿ ಯೋಜನಾ ವ್ಯಾಪ್ತಿಯ ಸಂಪಗಾವ ವಲಯದ ಗ್ರಾಮದಲ್ಲಿ ಮಧ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ರಚನೆ ಮತ್ತು ಶಿಬಿರದ ಪೂರ್ವಭಾವಿ ಸಭೆಯನ್ನು ಶ್ರೀ ಬೈಲಬಸ್ವೇಶ್ವರ ಕಲ್ಯಾಣ ಮಂದಿರದಲ್ಲಿ ಆಯೋಜನೆಯನ್ನ ಮಾಡಿದ್ದು ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಗಣ್ಯರು ಊರಿನ ಹಿರಿಯರು ಸಭೆಯಲ್ಲಿ ಉಪಸ್ಥಿತರಿದ್ದು ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರನ್ನಾಗಿ ಸಾತಪ್ಪ ಟೊಣ್ಣಿ ಯವರನ್ನು ಆಯ್ಕೆ ಮಾಡಿ ಗೌರವ ಅಧ್ಯಕ್ಷರನ್ನಾಗಿ ಉಮಾ ಬುಲಾಕೆ ಯವರನ್ನು ಉಪಾಧ್ಯಕ್ಷರಾಗಿ ಸಿಕಂದರ್ ತಾಳಿಕೋಟಿ, ಅನಿಲ್ ನೇಸರಗಿ, ಲಕ್ಷ್ಮಿ ಉಳವಿ ಕೋಶಾಧಿಕಾರಿಯನ್ನಾಗಿ ಬಸವರಾಜ್ ಉಳ್ಳಾಗಡ್ಡಿ ಗೌರವ ಸಲಹೆಗಾರರು ಸುರೇಶ್ ಕುರುಬರ, ಅಶೋಕ್ ಪುಟ್ಟಿ, ಮಲ್ಲಿಕಾರ್ಜುನವರ, ಪಾಲಾಕ್ಷಿ ಕಟ್ಟಿ, ನಾಗೇಶ್ ಉಳವಿ, ಶಿವಾನಂದ್ ಬೆಳ್ಳಿಕಟ್ಟಿ, ಅಣ್ಣಪ್ಪ ನಾಗನಗೌಡ, ನಾಗನಗೌಡ ಪಾಟೀಲ್ ರವರನ್ನು ಸರ್ವ ಸದಸ್ಯರ ಅನುಮತಿ ಮೇರೆಗೆ ಆಯ್ಕೆಯನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಶಿಬಿರದ ಖರ್ಚು ವೆಚ್ಚಗಳಿಗೆ ಪೂರಕವಾಗಿ ಉತ್ತಮ ರೀತಿಯ ವಸ್ತುರೂಪದ ವಾಗ್ದಾನ ನಡೆಯಿತು. ಜಿಲ್ಲೆಯ ನಿರ್ದೇಶಕರಾದ ಸತೀಶ್ ನಾಯಕ್ ಜನಜಾಗೃತಿ ಯೋಜನಾಧಿಕಾರಿಗಳಾದಂತಹ ಭಾಸ್ಕರ್ ತಾಲೂಕ್ ಯೋಜನಾಧಿಕಾರಿಗಳಾದ ಯೋಗೇಶ್ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.
