ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕು ಹಿರೇ ಕಬ್ಬಾರ ವಲಯದಲ್ಲಿ ಮಧ್ಯವರ್ಜನ ಶಿಬಿರದ ಸಲುವಾಗಿ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಿದ್ದು ಈ ಸಭೆಯಲ್ಲಿ ಜಿಲ್ಲಾ ನಿರ್ದೇಶಕರಾದ ಶಿವರಾಯ ಪ್ರಭು ರವರು ಪ್ರಾಸ್ತಾವಿಕ ಮಾತುಗಳ ನಾಡಿ ಶಿಬಿರದ ಉದ್ದೇಶ ಮತ್ತು ರೂಪು ರೇಷಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ವ್ಯವಸ್ಥಾಪನ ಸಮಿತಿಯ ರಚನೆಯನ್ನು ಮಾಡಿ ಸಮಿತಿಯ ಉದ್ಘಾಟನೆಯನ್ನು ನೆರವೇರಿಸಲಾಯಿತು. ಸಮಿತಿಯ ಗೌರವ ಅಧ್ಯಕ್ಷರಾಗಿ ಕರಿಬಸನಗೌಡ ಪಾಟೀಲ್, ಅಧ್ಯಕ್ಷರಾಗಿ ಶಿವಾನಂದಪ್ಪ ಹಾಗೂ ಉಪಾಧ್ಯಕ್ಷರಾಗಿ ರವೀಂದ್ರ, ಮಹಮ್ಮದ್, ಹಾಗೂ ಗೌರವ ಸಲಹೆಗಾರರಾಗಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಹಾಗೂ ಸಾಹಿತಿಗಳಾದ ನಿಂಗಪ್ಪ ಚಳ್ಳಿಕೆರೆ, ಶಂಬಣ್ಣ ಗೋಣೆಪ್ಪನವರ್, ಸುಭಾಷ್ ಒಳಗೊಂಡ 17 ಮಂದಿಯ ಸಮಿತಿಯನ್ನು ರಚಿಸಲಾಯಿತು. ಜನಜಾಗೃತಿ ವೇದಿಕೆ ಯೋಜನಾಧಿಕಾರಿಗಳಾದ ಭಾಸ್ಕರ್ ಮಧ್ಯವರ್ಜನ ಶಿಬಿರದ ಚಿಕಿತ್ಸಾ ವಿಧಾನ, ಸಮಿತಿಯ ಜವಾಬ್ದಾರಿ ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ಮಾಹಿತಿ ನೀಡಿದರು, ಬಳಿಕ ವಸ್ತರೂಪದ ವಾಗ್ದಾನವನ್ನ ಪಡೆಯಲಾಯಿತು. ತಾಲೂಕಿನ ಯೋಜನಾಧಿಕಾರಿ ಸುನಿತಾ ನಾಯಕ್ ಪೂರಕ ವ್ಯವಸ್ಥೆಯನ್ನು ಮಾಡಿ ಆಗಮಿಸಿದ ಸರ್ವರನ್ನ ಸ್ವಾಗತಿಸಿ ನಿರ್ವಹಿಸಿದರು. ವಲಯದ ಮೇಲ್ವಿಚಾರಕರಾದ ರಾಜು D K ಹಾಗೂ ಊರಿನ ಗಣ್ಯರು ಮತ್ತು ಪದಾಧಿಕಾರಿಗಳು ಸಂಘ ಸಂಸ್ಥೆಗಳ ಅಧ್ಯಕ್ಷರು ಉಪಾಧ್ಯಕ್ಷರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
