ಹಿರೇಕೆರೂರು ತಾಲೂಕಿನಲ್ಲಿ 1802 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ಹಿರೇಕೆರೂರು ತಾಲೂಕಿನ ಹಂಸಬಾವಿಯಲ್ಲಿ 1802 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಂಸಬಾವಿಯ ಶಿವಯೋಗೇಶ್ವರ ಆಶ್ರಮದ ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ನೆರವೇರಿಸಿದರು. ಕಾರ್ಯಕ್ರದಲ್ಲಿ ಹಾವೇರಿ ಜಿಲ್ಲಾ ನಿರ್ದೇಶಕರಾದ ಶ್ರೀ ಶಿವರಾಯ ಪ್ರಭು ರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಶ್ರೀ ಶಿವರಾಯ ಪ್ರಭು, ಹಿರೇಕೆರೂರು ಆಡಳಿತ ವೈದ್ಯಾಧಿಕಾರಿಗಳಾದ
ಶ್ರೀ ಎನ್. ಚೇತನ್ ಕುಮಾರ, ಹಂಸಬಾವಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ರಾಜಶೇಖರ, ಹೊಳೆ ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಶ್ರೀ ಬಸವರಾಜಪ್ಪ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ
ಶ್ರೀ ಮೃತ್ಯುಂಜಯ ಬಾಸುರು, ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಶ್ರೀ ಮಂಜುನಾಥ, ಜನಜಾಗೃತಿ ಯೋಜನಾಧಿಕಾರಿ ಶ್ರೀ ಭಾಸ್ಕರ್ ಎನ್., ಶಿಬಿರಾಧಿಕಾರಿ ಶ್ರೀ ಚಿತ್ತರಂಜನ್, ಆರೋಗ್ಯ ಸಹಾಯಕರಾದ ಶ್ರೀಮತಿ ಪ್ರೆಸಿಲ್ಲಾ ಡಿ’ಸೋಜಾ, ಹಿರೇಕೆರೂರು ತಾಲೂಕಿನ ಎಲ್ಲ ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರು, ಜನಜಾಗೃತಿ ಮೇಲ್ವಿಚಾರಕ ಶ್ರೀ ಉಮೇಶ್ ಮತ್ತು ನವಜೀವನ ಸದಸ್ಯರು ಉಪಸ್ಥಿತರಿದ್ದರು.