ಹಿರಿಯೂರು ತಾಲೂಕಿನಲ್ಲಿ ಈ ದಿನ ಅಕ್ಟೋಬರ್ 2ರ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಸ್ಮೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು DYSP ಚೈತ್ರ ಮೇಡಂ ಅವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಆಶ್ರಮದ ಮಾತಾಜಿ ಚೈತನ್ಯಮಾಯಿಯವರು ಪಾಲ್ಗೊಂಡ ಆಶೀರ್ವದಿಸಿದರು ಹಿರಿಯೂರು ಚರ್ಚಿನ ಧರ್ಮ ಗುರುಗಳಾದ ಶ್ರೀ ನೆಲ್ಸನ್ ಡಿಸೋಜ ರವರು ಮಾತನಾಡಿ ಸರ್ವಧರ್ಮದ ಸಮ್ಮಿಲನವಾಗಿದೆ ಪೂಜ್ಯ ವೀರೇಂದ್ರ ಹೆಗಡೆ ಅವರ ಕಾರ್ಯಕ್ರಮ ಶ್ಲಾಘನೀಯ ಎಂದರು ಹಿರಿಯೂರು ತಾಲೂಕಿನ ಉಪ ತಾಶಿಲ್ದಾರ್ರು ಶ್ರೀ ತಿಪ್ಪೇಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪಾನಮುಕ್ತರಿಗೆ ಅಭಿನಂದಿಸಲಾಯಿತು.
