ಹಾಸನ : ತಣ್ಣೀರುಹಳ್ಳದ ಶಿವಲಿಂಗೇಶ್ವರ ಮಠದ ಸಭಾಂಗಣದಲ್ಲಿ ಜರಗಿದ 1597ನೇ ಮದ್ಯವರ್ಜನ ಶಿಬಿರದ ಸಮಾರೋಪಹಾಗೂ ಗಾಂಧಿಸ್ಮೃತಿ ಮತ್ತು ಪದಗ್ರಹಣ ಸಮಾರಂಭ

Janajagurthi Vedike News

ಹಾಸನ : ತಣ್ಣೀರುಹಳ್ಳದ ಶಿವಲಿಂಗೇಶ್ವರ ಮಠದ ಸಭಾಂಗಣದಲ್ಲಿ ಜರಗಿದ 1597ನೇ ಮದ್ಯವರ್ಜನ ಶಿಬಿರದ ಸಮಾರೋಪಹಾಗೂ ಗಾಂಧಿಸ್ಮೃತಿ ಮತ್ತು ಪದಗ್ರಹಣ ಸಮಾರಂಭ ತಣ್ಣೀರುಹಳ್ಳದ ಮಠದ ಶ್ರೀ ಶ್ರೀ ವಿಜಯಕುಮಾರ ಸ್ವಾಮೀಜಿಯವರು ಗಾಂಧಿ ಕನಸು ನನಸಾಗಲು ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ ಕಾರ್ಯ ಶ್ಲಾಘನೀಯ, ಮದ್ಯಪಾನ ಕುಟುಂಬದ &ಸಮಾಜದ ಶಾಂತಿಯನ್ನು ನಾಶ ಮಾಡುತ್ತದೆ ಈ ವೇಳೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆದಿದೆ ಎಂದು ಆಶೀರ್ವಚನ ನೀಡಿದರು .
ಸಭಾಧ್ಯಕ್ಷತೆಯನ್ನು ಎಂದು ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ದೇವರು ವಹಿಸಿ ಕಾರ್ಯಕ್ರಮದ ನಾವೆಲ್ಲರೂ ಧನ್ಯರಾದೆವು ಎಂದರು , ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ಜನಜಾಗೃತಿ ವೇದಿಕೆಯರಾಜ್ಯ ಅಧ್ಯಕ್ಷರಾದ ಸತೀಶ್ ಹೊನ್ನವಳ್ಳಿ ಯವರು , ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಲ್ಲೇಶಗೌಡ , ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್ ರಾವ್ ,ನಿರ್ಗಮಿತ ಹಾಸನ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ,ನೂತನ ಜಿಲ್ಲಾಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡ ಡಾಕ್ಟರ್ ನವೀನ್ ಚಂದ್ರ ಶೆಟ್ಟಿ ,ಜಿಲ್ಲಾ ಜನಜಾಗೃತಿ ವೇದಿಕೆಯ ಹಾಗೂ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು ,ಯೋಜನಾಧಿಕಾರಿಗಳಾದ ಪುರುಷೋತ್ತಮ ,ಭಾಸ್ಕರ್ ಉಪಸ್ಥಿತರಿದ್ದರು .