ಹಾಸನ ಜಿಲ್ಲೆಯ ಆಲೂರು ತಾಲೂಕಿನ ತಾಲೂಕು ಮಟ್ಟದ ಗಾಂಧಿ ಸ್ಮೃತಿ ಹಾಗೂ ನವ ಜೀವನ ಸಮಿತಿ ಸದಸ್ಯರ ಸಮಾವೇಶ ಕಾರ್ಯಕ್ರಮ

Janajagurthi Vedike Uncategorized

ಹಾಸನ ಜಿಲ್ಲೆಯ ಆಲೂರು ತಾಲೂಕಿನ ತಾಲೂಕು ಮಟ್ಟದ ಗಾಂಧಿ ಸ್ಮೃತಿ ಹಾಗೂ ನವ ಜೀವನ ಸಮಿತಿ ಸದಸ್ಯರ ಸಮಾವೇಶ ಕಾರ್ಯಕ್ರಮವನ್ನು ಆಲೂರು ತಾಲೂಕಿನ ತಹಶೀಲ್ದಾರರಾದ ಶ್ರೀ ಮಲ್ಲಿಕಾರ್ಜುನ್ ರವರು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಆಲೂರು ತಾಲೂಕಿನ ಶಿಕ್ಷಕರು, ಸಾಹಿತಿಗಳು ಆಗಿರುವ ಶ್ರೀ ಎಂ.ಜಿ. ಪರಮೇಶ್ ಮಡಬಲುರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ “ಗಾಂಧೀಜಿಯವರ ತತ್ವಾದರ್ಶಗಳು ಮತ್ತು ದುಶ್ಚಟಮುಕ್ತ ಸಮಾಜ ನಿರ್ಮಾಣದಲ್ಲಿ ನಮ್ಮ ಹೊಣೆ”ವಿಷಯದ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ನಿರ್ದೇಶಕರಾದ ಶ್ರೀ ಸುರೇಶ್ ಮೊಯಿಲಿ ಸರ್ ರವರು, ಆಲೂರು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಶ್ರೀ ಸಿದ್ದೇಶ್ ಕುಮಾರ್ ರವರು, ಆಲೂರು ಪೊಲೀಸ್ ಠಾಣಾ ಎ ಎಸ್ ಐ ಶ್ರೀ ದೇವರಾಜ್ ರವರು, ಆಲೂರು ವೀರಶೈವ ಸಮಾಜದ ಅಧ್ಯಕ್ಷರಾದ ಶ್ರೀ ರೇಣುಕಾ ಪ್ರಸಾದ್ ರವರು ಹಾಗೂ ಜನಜಾಗೃತಿ ವೇದಿಕೆಯ ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸಭಾ ವೇಧಿಕೆಯಲ್ಲಿದ್ದ ಗಣ್ಯರು ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗಾಂಧಿ ಸ್ಮೃತಿ ನೆರವೇರಿಸಿದರು. ಈ ವೇದಿಕೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ತಹಶೀಲ್ದಾರರ ಮೂಲಕ ಠರಾವ್ ಮಂಡನೆಯನ್ನು ಮಾಡಲಾಯಿತು. ನವಜೀವನ ಸಮಿತಿ ಸದಸ್ಯರನ್ನು ಗಾಂಧಿ ಟೋಪಿ ಹಾಗೂ ಗುಲಾಬಿ ಹೂ ನೀಡುವುದರ ಮೂಲಕ ಪಾನಮುಕ್ತ ಜೀವನಕ್ಕೆ ಅಭಿನಂದಿಸಲಾಯಿತು.