ಹಾವೇರಿ ಜಿಲ್ಲೆ ಹಾವೇರಿ ತಾಲೂಕಿನ ದೇವಗಿರಿ ಡಾ. ಪುಟ್ಟರಾಜ ಗವಾಯಿಗಳವರ ಸಭಾಭವನದಲ್ಲಿ ನವಜೀವನೋತ್ಸವ ಕಾರ್ಯಕ್ರಮ ನಡೆಸಲಾಯ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರಾದ ಶ್ರೀ ಮುತ್ತಣ್ಣ ಯಲಿಗಾರ ರವರು ನೆರವೇರಿಸಿ ಶುಭ ಹಾರೈಸಿದರು. ದಿವ್ಯ ಸಾನಿಧ್ಯವನ್ನು ಶ್ರೀ ಷ. ಬ್ರ. ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಶೈಲಾ ಶಾಖಾ ಹರಸೂರು ಬಣ್ಣದ ಮಠ ಹಾವೇರಿ ಇವರು ಆಶೀರ್ವಚನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಸನಗೌಡ, ಪರ್ವತ ಗೌಡ, ಪಾಟೀಲ ಅಧ್ಯಕ್ಷರು ಗ್ರಾಮ ಪಂಚಾಯತ ದೇವಗಿರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀ ನಿಜಲಿಂಗಪ್ಪ ಬಸೆಗಣ್ಣಿ, ಶ್ರೀ ಮಂಜುನಾಥ ಶಿತಾಳದ, ಶ್ರೀ SA ವಜ್ರಕುಮಾರ, ಶ್ರೀ ರುದ್ರೇಶ ಚಿನ್ನಣ್ಣನವರ ಮತ್ತು ಧಾರವಾಡ ಪ್ರಾದೇಶಿಕ ಕಛೇರಿ ವ್ಯಾಪ್ತಿಯ ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿ ಶ್ರೀಮತಿ ಮಲ್ಲಿಕಾ ರವರು ಉಪಸ್ತರಿದ್ದು ಶುಭ ಹಾರೈಸಿದರು. ಯೋಜನಾಧಿಕಾರಿ ನಾರಾಯಣ ಜಿ ಪ್ರಾಸ್ತವಿಕವಾಗಿ ಮಾತಾಡಿದರು, ಮೇಲ್ವಿಚಾರಕರಾದ ಸಂತೋಷರವರು ನಿರೂಪಿಸಿ ಸ್ವಾಗತಿಸಿದರು ವಲಯ ಮೇಲ್ವಿಚಾರಕರು ರತ್ನಾರವರು ಧನ್ಯವಾದ ಮಾಡಿದರು.
