ಹಾವೇರಿ ಜಿಲ್ಲಾ ಜನಜಾಗೃತಿ ವೇದಿಕೆಯ 2025-26ನೇ ಸಾಲಿನ ಪ್ರಥಮ ಸಭೆ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷರಾದ ಕಲ್ಯಾಣ್ ಕುಮಾರ್ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸದ್ರಿ ಸಭೆಯಲ್ಲಿ ವರದಿ ವರುಷದ ಕ್ರಿಯಾ ಯೋಜನೆ ಕಾರ್ಯಕ್ರಮಗಳಾದ ಮ. ಶಿಬಿರ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ನವ ಜೀವನ ಸಮಿತಿಗಳ ಬಲವರ್ಧನೆ, ಪಾನ ಮುಕ್ತ ಗ್ರಾಮ ಅನುಷ್ಠಾನದ ಬಗ್ಗೆ, ಹಾಗು ಯೋಜನೆಯ ಇತರ ಕಾರ್ಯಕ್ರಮದಲ್ಲಿ ಜನಜಾಗೃತಿ ಸದಸ್ಯರು ಕೈಜೋಡಿಸುವ ಬಗ್ಗೆ ಆರೋಗ್ಯಕರ ಚರ್ಚೆ ನಡೆದು ನಿರ್ಣಯಿಸಲಾಯಿತು.ಸದ್ರಿ ಸಭೆಯಲ್ಲಿ ಜಿಲ್ಲಾ ವ್ಯಾಪ್ತಿಯ ಗೌರವಾನ್ವಿತ ಸದಸ್ಯರು ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿದರು, ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಶಿವರಾಯ ಪ್ರಭು ಪೂರಕ ಸಲಹೆ ಮತ್ತು ಮಾರ್ಗದರ್ಶನಗಳನ್ನು ನೀಡಿದರು, ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ್, ಜಿಲ್ಲಾ ವ್ಯಾಪ್ತಿಯ ಕ್ಷೇತ್ರ ಯೋಜನಾಧಿಕಾರಿಗಳು ಉಪಸ್ಕರಿದ್ದ ಸಭೆಯಲ್ಲಿ, ಜಿಲ್ಲಾ ಆಡಿಟ್ ಪ್ರಬಂಧಕರಾದ ಪ್ರದೀಪ್ ರವರು ಸಭೆಯನ್ನು ನಿರ್ವಹಿಸಿ, ಹಾವೇರಿ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಶ್ರೀಮೂರ್ತಿ ಶೆಟ್ಟಿ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿಗಳಾದ ಶಿವರಾಯ ಪ್ರಭು ಅವರು ವಂದಿಸಿದರು.
