ಹಾವೇರಿಯಲ್ಲಿ ಗಾಂಧೀಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಹಾಗೂ ಜನಜಾಗೃತಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ “ಮಾನವ ಜನ್ಮ ಪಡೆಯಲು ಪುಣ್ಯ ಮಾಡಿರಬೇಕು” “ದೇಹವೇ ದೇಗುಲ” ಎಂದು ಶರಣರು ಉಲ್ಲೇಖಿಸಿದ್ದರು “ಆಧುನಿಕತೆಯ ಹೆಸರಿನಲ್ಲಿ ಜನಸಮೂಹ ದುಶ್ಚಟಗಳಿಗೆ ಬಲಿಯಾಗುತ್ತಿರುವ ಸನ್ನಿವೇಶಗಳನ್ನು ಕಂಡು ನೋವಾಗುತ್ತಿದೆ ಇಂತಹ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ದುಶ್ಚಟಗಳ ವಿರುದ್ಧದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸುದೈವ” ಎಂದು ಹಾವೇರಿ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿರವರು ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಸಹಯೋಗದಲ್ಲಿ ನಡೆದ ಗಾಂಧಿ ಸ್ಮೃತಿ ಮತ್ತು ನವಜೀವನ ಸದಸ್ಯರ ಸಮಾವೇಶ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ನೂತನ ಪದಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದರು. ಮಹಾತ್ಮಾ ಗಾಂಧೀಜಿರವರ ದುಶ್ಚಟ ಮುಕ್ತ ಸಮಾಜದ ಕನಸನ್ನು ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮಗಳು ಮತ್ತು ಮದ್ಯವರ್ಜನ ಶಿಬಿರಗಳ ಮೂಲಕ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನನಸು ಮಾಡುತ್ತಿದ್ದಾರೆ ಮತ್ತು ದುಶ್ಚಟಗಳಿಂದ ದೂರವಾಗಿ ಉತ್ತಮ ಜೀವನ ನಡೆಸುತ್ತಿರುವ ನವಜೀವನ ಸಮಿತಿ ಸದಸ್ಯರಿಗೆ ಗಾಂಧಿಜಯಂತಿ ದಿನ ಅಭಿನಂಡಿಸುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಗಾಂಧಿಸ್ಮೃತಿ ನಿಮಿತ್ಯ ಗಾಂಧೀಜಿ ಶಾಸ್ತ್ರೀಜಿಯವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು ತದನಂತರ ನವಜೀವನ ಸಮಿತಿ ಸದಸ್ಯರಿಗೆ ಮತ್ತು 6 ಯೋಜನಾ ಪ್ರದೇಶಗಳ ಸಾಧಕ ನವಜೀವನ ಸಮಿತಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು ಕಾರ್ಯಕ್ರಮ ಉದ್ಘಾಟಿಸಿದ ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ “ನಾನು ತಾಂಡಾ ಪರಿಸರದಲ್ಲಿ ಹುಟ್ಟಿ ಬೆಳೆದರೂ ರಾಜಕೀಯ ವ್ಯಕ್ತಿಯಾಗಿದ್ದರೂ ಯಾವತ್ತೂ ನನ್ನ ಬಳಿ ದುಶ್ಚಟಗಳು ಸುಳಿದಿಲ್ಲ ಸಂಸ್ಕಾರಯುತ ಶಿಕ್ಷಣ ಮತ್ತು ಜೀವನ ಶಿಸ್ತು ಇದಕ್ಕೆ ಕಾರಣವಾಗಿದೆ ಧರ್ಮಸ್ಥಳ ಕ್ಷೇತ್ರದ ಮೂಲಕ ನಿಮಗೆಲ್ಲರಿಗೂ ದುಶ್ಚಿಟಮುಕ್ತ ಬದುಕು ಪ್ರಾಪ್ತವಾಗಿದೆ ಇದರಿಂದ ನಿಮ್ಮ ಮನೆಯ ಹೆಣ್ಣುಮಕ್ಕಳು ನೆಮ್ಮದಿಯ ಜೀವನ ಪಡೆಯುವಂತಾಗಿದ್ದು ನಿಮ್ಮ ಪುನರ್ಜನ್ಮವೆಂದರೂ ತಪ್ಪಾಗಲಾರದು ಎಂದು ನವಜೀವನ ಸದಸ್ಯರಿಗೆ ಶುಭ ಹಾರೈಸಿದರು. ಧಾರವಾಡ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್ ಮಾತನಾಡಿ ಗಾಂಧೀಜಿರವರ ಜನ್ಮದಿನದ ಶುಭ ಸಂದರ್ಭದಲ್ಲಿ ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ “ಒಂದು ಕಾಲದಲ್ಲಿ ಸಮಾಜದಲ್ಲಿ ಅತ್ಯಂತ ಕೀಳರಿಮೆಯಿಂದ ನೋಡುತ್ತಿದ್ದ ವ್ಯಸನಿಗಳನ್ನು ಇಂದು ಅವರಿಂದ ದುಶ್ಚಟಗಳು ದೂರವಾದಾಗ ಸಮಾಜ ಹೇಗೆ ಗೌರವ ನೀಡುತ್ತಿದೆ ಎಂಬುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ” ಕಳೆದ 3 ದಶಕಗಳಿಂದ ಜನಜಾಗೃತಿ ವೇದಿಕೆಗಳ ಮೂಲಕ ದುಶ್ಚಟಗಳ ವಿರುದ್ಧ ಜಾಗೃತಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ ಈ ಕಾರ್ಯಕ್ರಮಗಳು ನಿಮ್ಮ ಬದುಕಿಗೆ ಹೊಸ ಭಾಷ್ಯವನ್ನು ಬರೆದು ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲಿ ಎಂದು ಶುಭ ಹಾರೈಸಿದರು. ಜನಜಾಗೃತಿ ವೇದಿಕೆಯ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಲಾಯಿತು ನಂತರ ಧಾರವಾಡ ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ್ ಹಕ್ಕೋತ್ತಾಯದ ವಿಷಯ ಮಂಡಿಸಿ ವಿಧಾನ ಸಭೆಯ ಉಪಾಧ್ಯಕ್ಷರ ಮೂಲಕ ಸರಕಾರದ ಗಮನಕ್ಕೆ ಸಲ್ಲಿಸಲಾಯಿತು. ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಮುರುಗೆಪ್ಪಾ ಶೆಟ್ಟರ್ ಪೊಲೀಸ್ ಅಧಿಕಾರಿ ಶರಣಬಸಪ್ಪ ನಿಕಟಪೂರ್ವ ಅಧ್ಯಕ್ಷ ಮುತ್ತಣ್ಣ ಯಲಿಗಾರ ನಿಯೋಜಿತ ಅಧ್ಯಕ್ಷ ಕಲ್ಯಾಣ ಕುಮಾರ ಶೆಟ್ಟರ ನಿಯೋಜಿತ ಉಪಾಧ್ಯಕ್ಷ ನಾಗರಾಜ್ ಅನ್ವೇರಿ ಕೋಶಾಧಿಕಾರಿ ಮಂಜುನಾಥ್ ಯಲಿವಾಳ ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ಉಪಸ್ಥಿತರಿದ್ದರು
