ಬಾಗಲಕೋಟೆ ಜಿಲ್ಲೆಯ ಜಮಖಂಡಿ ಹಾಗೂ ಮುಧೋಳ ತಾಲೂಕಿನ 75 ಜನ ನವ ಜೀವನ ಸಮಿತಿ ಸದಸ್ಯರಿಗೆ ಬಿಜಾಪುರ ಸಂಸ್ಥೆಯಲ್ಲಿ ಕಳೆದ ಹತ್ತು ದಿನಗಳಿಂದ ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆ ಬಗೆ ಸ್ವ ಉದ್ಯೋಗದ ತರಬೇತಿ ನೀಡುತ್ತಿದ್ದು, ಇಂದು ಸಮಾರೋಪ ಸಮಾರಂಭ ನಡೆಸಲಾಯಿತು, ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಶ್ರೀಕಾಂತ್ ಸಂದಿಮನಿ, ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಮುತ್ತಣ್ಣ ಧನಗರ್, ಉಪನ್ಯಾಸಕರಾದ ಜಗದೀಶ್ ಪೂಜಾರ್ ಶ್ರೀ ಮಲ್ಲಿಕಾರ್ಜುನ್ ಉಪಸ್ಥರಿದ್ದರು. ಈ ಸಂದರ್ಭದಲ್ಲಿ ನವ ಜೀವನ ಸಮಿತಿ ಸದಸ್ಯರಿಗೆ ಸ್ವ -ಉದ್ಯೋಗ ತರಬೇತಿ ಪಡೆದ ಬಗ್ಗೆ ಸರ್ಟಿಫಿಕೇಟ್ ನೀಡಲಾಯಿತು.
