ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ) ಬ್ರಹ್ಮಾವರ ತಾಲೂಕು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ (ರಿ) ಬ್ರಹ್ಮಾವರ ತಾಲೂಕು ಹಾಗೂ ಮಹಾತ್ಮ ಗಾಂಧಿ ಪ್ರೌಢ ಶಾಲೆ ಸಾಹೇಬರಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಸಂಪನ್ಮೂಲ ವ್ಯಕ್ತಿಗಳಾದ ಸರಕಾರಿ ಪ್ರೌಢಶಾಲೆ ಆವರ್ಸೆಯ ಸಹಶಿಕ್ಷಕ ನಂಚಾರು ಶಶಿಧರ ಶೆಟ್ಟಿ ನೆರವೇರಿಸಿ ಕೊಟ್ಟರು.
ಸಮಾಜದಲ್ಲಿ ನಾವು ಹೇಗಿರಬೇಕೋ ಹಾಗಿದ್ದರೇನೇ ಚೆನ್ನ . ದುಶ್ಚಟಗಳಿಗೆ ದಾಸರಾಗಿ ತನ್ನ ಬದುಕನ್ನು ತನ್ನ ಕೈಯಾರೆ ಕಳೆದುಕೊಳ್ಳುವುದಕ್ಕಿಂತ ಸಮಾಜಕ್ಕೆ ನಾನೇನು ಮಾಡಬೇಕು ಎಂಬುದನ್ನು ಅರಿತು ನಮ್ಮ ಗುರಿಯನ್ನು ಸಾಧಿಸುವ ಮೂಲಕ ಮಾದರಿ ವ್ಯಕ್ತಿಯಾಗಿ ಬದುಕಬೇಕು ತನ್ಮೂಲಕ ಸಮಾಜವೇ ಗುರುತಿಸಿಕೊಳ್ಳುವ ವ್ಯಕ್ತಿ ನಾವಾಗಬೇಕು” ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿದರು. ಸಂಸ್ಥೆಯ ಮುಖ್ಯ ಶಿಕ್ಷಕ ಸತೀಶ್ ನಾಯ್ಕ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಾರ್ಕೂರು ವಲಯದ ಮೇಲ್ವಿಚಾರಕ ಶ್ರೀ ರವೀಂದ್ರ ಎಸ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಯಡ್ತಾಡಿ ಒಕ್ಕೂಟದ ಸೇವಾ ಪ್ರತಿನಿಧಿ ಶ್ರೀಮತಿ ಆಶಾ ಶೆಟ್ಟಿ ವಂದಿಸಿದರು.
