ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Janajagurthi Vedike Uncategorized

ಚಿಕ್ಕೋಡಿ-2 ಯೋಜನಕಛೇರಿ ವ್ಯಾಪ್ತಿಯ ಹಿರೇಕೊಡಿ ವಲಯದ ನೇಜ್ ಗ್ರಾಮದ ಎಂ. ಎಲ್.ಎಂ ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮ ವನ್ನು ಮೊದಲಿಗೆ ಶಾಲೆಯ ವಿದ್ಯಾರ್ಥಿಗಳಿಂದ ಪ್ರಾಥನೆ ಹೇಳುವ ಮೂಲಕ ಪ್ರಾರಂಬಿಸಲಾಯಿತು, ಕಾರ್ಯಕ್ರಮ ದ ಉದ್ಘಾಟನೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಯಾದ ಶ್ರೀಮತಿ ಎ. ಸ್. ಭೋಜೆ ಅವರು ಹಾಗೂ ವೇದಿಕೆ ಮೇಲೆ ಇರುವ ಎಲ್ಲಾ ಶಿಕ್ಷಕರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯವರಾದ ಚಿನಗುಡೇ sir ರವರು ತಂಬಾಕು ವಿರೋಧಿ ಕಾರ್ಯಕ್ರಮದ ಕುರಿತು ವಿದ್ಯಾರ್ಥಿಗಳಿಗೆ ದುಷ್ಟಚಟಾ ಪರಿಣಾಮಗಳಿಂದ ಆಗುವ ತೊಂದರೆಗಳ ಕುರಿತು ಉದಾಹರಣೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಮನ ಮುಟ್ಟುವ ಹಾಗೆ ಮಾಹಿತಿ ನೀಡಿದರು, ಈ ಸಂದರ್ಭ ತಾಲೂಕಿನ ಯೋಜನಾಧಿಕಾರಿಗಳು ವಲಯದ ಮೇಲ್ವಿಚಾರಕರಾದ ಅರಿಹಂತ, ಶಾಲೆಯ ಸಹ ಶಿಕ್ಷಕರು ಸ್ಥಳೀಯ ಸೇವಾಪ್ರತಿನಿಧಿ ಕಾವೇರಿ, ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.