ಸಿಂಧನೂರು ತಾಲ್ಲೂಕಿನ ಶ್ರೀ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ನಡೆದ 1676ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವು ಸನ್ಮಾನ್ಯ ಶ್ರೀ ಶರಣಪ್ಪ ತೆಂಗಿನಕಾಯಿ ಅಧ್ಯಕ್ಷರು 1676ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಸಿಂಧನೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಪರಮ ಪೂಜ್ಯರು ಒಬ್ಬ ದೂರ ದೃಷ್ಟಿಕೋನ ಹೊಂದಿರುವ ವ್ಯಕ್ತಿ ಜೀವನದಲ್ಲಿ ಅಭಿವೃದ್ದಿ ಆಗಲು, ಸ್ವಾವಲಂಬಿ ಜೀವನ ನಡೆಸಲು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದು ತಾನು ಅಲ್ಲದೇ ತನ್ನ ಕುಟುಂಬ ಅಭಿವೃದ್ದಿ ಆಗಲು, ಜೀವನದ ದಾರಿಯನ್ನು ಯಶಸ್ವಿಗೊಳಿಸಲು , ಮಕ್ಕಳಿಗೆ ಶಿಕ್ಷಣ, ಸಾಮಾಜಿಕ ಕೆಲಸ, ಪ್ರಗತಿನಿಧಿ ಮೂಲಕ ಆರ್ಥಿಕ ಅಭಿವೃದ್ದಿ, ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡಲು ಮದ್ಯವರ್ಜನ ಶಿಬಿರದ ಮೂಲಕ ವ್ಯಸನ ಮುಕ್ತರಾಗಲು ಅವಕಾಶ, ಕೆರೆ ಅಭಿವೃದ್ಧಿ, ಶಿಕ್ಷಣ ಕ್ರಾಂತಿ, ಸ್ವ ಸಹಾಯ ಸಂಘಗಳ ಮೂಲಕ ಜನರ ಎಳಿಗೆಗಾಗಿ ಹಗಲಿರುಳು ಶ್ರಮಿಸುತಿದ್ದು ಅವರ ಜೊತೆಗೆ ನಾವೆಲ್ಲರೂ ಈ ಪುಣ್ಯ ಕಾರ್ಯಕ್ಕೆ ಕೈ ಜೋಡಿಸಿ ಒಂದು ಹೊಸ ಕ್ರಾಂತಿ ಮೂಡಿಸೋಣ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪಳ ಪ್ರಾದೇಶಿಕ ವಿಭಾಗದ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಗಣೇಶ್. ಬಿ.ಸರ್ ರವರು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಶ್ರೀ ಮ. ನಿ. ಪ್ರ. ಗುರು ಮಹಾಂತ ಮಹಾಸ್ವಾಮಿಗಳು ಚಿತ್ತರಗಿ ವಿಜಯ ಮಹಾಂತೇಶ್ವರ ಮಠ ಇಳಕಲ್ ಇವರು 53 ಜನ ಶಿಬಿರಾರ್ಥಿಗಳಿಗೆ ಶುಭಾಶೀರ್ವಚನ ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ವೆಂಕಟರಾವ್ ನಾಡಗೌಡ್ರು ಮಾನ್ಯ ಮಾಜಿ ಸಚಿವರು ಸಿಂಧನೂರು, ಶ್ರೀ ಕೆ. ವಿರುಪಾಕ್ಷಪ್ಪ ಮಾನ್ಯ ಮಾಜಿ ಸಂಸದರು ಕೊಪ್ಪಳ ಲೋಕಸಭಾ ಕ್ಷೇತ್ರ, ಶ್ರೀ ಅರುಣ್ ದೇಸಾಯಿ ಮಾನ್ಯ ತಹಸೀಲ್ದಾರ್ ಮತ್ತು ತಾಲೂಕು ದಂಡಾಧಿಕಾರಿಗಳು ಸಿಂಧನೂರು, ಶ್ರೀ ಕೆ. ಕರಿಯಪ್ಪ ಮಾನ್ಯ ಬಿಜೆಪಿ ಮುಖಂಡರು ಸಿಂಧನೂರು, ಶ್ರೀ ರೋಹಿತಾಕ್ಷ ಮಾನ್ಯ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್(ರಿ)ಬಳ್ಳಾರಿ ಜಿಲ್ಲೆ, ಶ್ರೀ ಎಂ. ಭಾಸ್ಕರ್ ಮಾನ್ಯ ಉಪಾಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಬಳ್ಳಾರಿ, ಎಲ್ಲ ಕಡೆ ಶರಣಪ್ಪ ಗೊರೇಬಾಳ್ ಮಾನ್ಯ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಬಳ್ಳಾರಿ, ಶ್ರೀ ಮರಿಬಸವರಾಜ ಬೊಮ್ಮನಾಳ ಮಾನ್ಯ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಬಳ್ಳಾರಿ, ಶ್ರೀ ಮಂಜುನಾಥ ಗುಂಡೂರ್ ಮಾನ್ಯ ಪೌರಾಯುಕ್ತರು ನಗರಸಭೆ ಸಿಂಧನೂರು, ಶ್ರೀ ಮಧ್ವರಾಜ್ ಆಚಾರ್ಯ ಮಾನ್ಯ ಮಾಜಿ ಅಧ್ಯಕ್ಷರು ನಗರ ಯೋಜನಾ ಪ್ರಾಧಿಕಾರ ಸಿಂಧನೂರು, ತಾಲ್ಲೂಕಿನ ಒಕ್ಕೂಟದ ಅಧ್ಯಕ್ಷ ಪದಾಧಿಕಾರಿಗಳು, ಸ್ವ ಸಹಾಯ ಸಂಘದ ಪಾಲುದಾರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಕೊಪ್ಪಳ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಗಳಾದ ಶ್ರೀ ನಾಗೇಶ್ ವೈ.ಎ. ಇವರು ಕುಟುಂಬದ ದಿನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 53 ಜನ ಶಿಬಿರಾರ್ಥಿ ಬಂಧುಗಳು ದಂಪತಿ ಸಮೇತ ಭಾಗವಹಿಸಿ ಇದರ ಪ್ರಯೋಜನ ಪಡಕೊಂಡು ನವಜೀವನಕ್ಕೆ ಕಾಲಿಟ್ಟರು. ತಾಲೂಕ್ ಯೋಜನಾಧಿಕಾರಿಗಳಾದ ಶ್ರೀ ಶೇಖರ್ ಶೆಟ್ಟಿ ಸರ್ ರವರು ಎಲ್ಲಾ ಗಣ್ಯರನ್ನು ಸ್ವಾಗತಿಸಿದರು. ಶ್ರೀಮತಿ ರೂಪ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಬಳ್ಳಾರಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಾಲ್ಗುಂದ ವಲಯದ ಮೇಲ್ವಿಚಾರಕರಾದ ಶ್ರೀ ಬಸವರಾಜ್ ರವರು ಎಲ್ಲರಿಗೂ ಕೂಡ ಧನ್ಯವಾದ ಸಮರ್ಪಣೆಗೈದರು.
ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿಗಳು, ಶಿಬಿರಾಧಿಕಾರಿಗಳು, ಆರೋಗ್ಯ ಸಹಾಯಕರು, ಜನಜಾಗೃತಿ ಮೇಲ್ವಿಚಾರಕರು,ಯೋಜನೆಯ ಕಾರ್ಯಕರ್ತರು, ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಸಾರ್ವಜನಿಕ ಸಜ್ಜನ ಬಂಧುಗಳು, ನವಜೀವನ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.
