ಸಕಲೇಶಪುರದಲ್ಲಿ ಕಳೆದ ತಿಂಗಳು ನಡೆದ 1615 ನೇ ಮಧ್ಯವರ್ಜನ ಶಿಬಿರದ ಪ್ರಥಮ ಮಾಸಿಕ ಸಭೆಯನ್ನು ನಡೆಸಲಾಯಿತು , ಸಭೆಯಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ವಿಜಯರಾಜ್, ಹಾಸನ ಜಿಲ್ಲಾ ಜನಜಾಗೃತಿ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಜನಜಾಗೃತಿ ಸದಸ್ಯರಾದ ಉಮಾನಾಥ ಕೋಟ್ಯಾನ್, ಮಂಜುನಾಥ್, ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷರಾದ ದೇವರಾಜ್, ಯೋಜನಾಧಿಕಾರಿ ಪುರುಷೋತ್ತಮ್, ಜನಜಾಗೃತಿ ಕಾರ್ಯಕ್ರಮಗಳ ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ್, ಮೇಲ್ವಿಚಾರಕಿ ಮೋಹಿನಿ, ನವಜೀವನ ಪೋಷಕರು ನವಜೀವನ ಸದಸ್ಯರು ಉಪಸ್ಥಿತರಿದ್ದರು, ಈ ಸಂದರ್ಭ ನವ ಜೀವನ ಸದಸ್ಯರಿಗೆ ಎದುರಾಗುವ ಸಮಸ್ಯೆಗಳು ಎದುರಿಸುವ ಪರಿ, ಸಂಪಾದನೆ ಹಾಗೂ ಸಮಾಜಸೇವೆ, ಶೌರ್ಯ ವಿಪತ್ತು ಘಟಕದಲ್ಲಿ ಸೇರಿಕೊಳ್ಳುವ ಬಗ್ಗೆ ಹಾಗೂ ನವಜೀವನ ಸಮಿತಿಗಳ ಸಭೆಗಳ ಬಗ್ಗೆ ವಿಮರ್ಶೆ ಮಾಡಿ ಮಾಹಿತಿ ನೀಡಿ ಭಜನಾ ಕಾರ್ಯಕ್ರಮವನ್ನು ನಡೆಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
