ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ). ಸಂಕೇಶ್ವರ ತಾಲೂಕು ಬಿದ್ರೆವಾಡಿ ವಲಯದ ಉಳ್ಳಾಗಡ್ಡಿ ಖಾನಾಪುರ ಕಾರ್ಯಕ್ಷೇತ್ರದ ಪಿ ಬಿ ಹೆಬ್ಬಾಳಿ ಕರ್ನಾಟಕ ಪಬ್ಲಿಕ್ ಶಾಲೆಯ ಮಕ್ಕಳಿಗೆ ಡಾ.ಶಿವಯೋಗಿ ಮಹಾಂತ ಮಹಾಸ್ವಾಮಿಯವರ ಜನ್ಮ ದಿನದ ಪ್ರಯುಕ್ತ ” ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ” ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಗೌರವಾನ್ವಿತ ತಾಲೂಕು ಯೋಜನಾಧಿಕಾರಿಗಳು ವಿನಾಯಕ ಕಾಕಂಬಿ ಸರ್ ಅವರು ಕ್ಷೇತ್ರದ ಹಿನ್ನೆಲೆ, ಪೂಜ್ಯರ ಸಮಾಜಮುಖಿ ಕಾರ್ಯಕ್ರಮಗಳು, ಹಾಗೂ ದುಶ್ಚಟದಿಂದಾಗುವ ದುಶ್ಪರಿಣಾಮಗಳ ಬಗ್ಗೆ ಮಾತನಾಡುತ್ತಾ ಯುವಶಕ್ತಿ ಬಲಿಷ್ಠ ವಾದ ಶಕ್ತಿಯಾಗಿದ್ದು ಸುಭದ್ರ ರಾಷ್ಟ್ರದ ನಿರ್ಮಾಣ ದಲ್ಲಿ ಯುವಜನರ ಪಾತ್ರವು ಅಪಾರವಾಗಿದೆ. ಯುವ ಜನರು ಕೆಟ್ಟ ಜನರ ಸಹವಾಸದಿಂದ ಆಮಿಷಕ್ಕೆ ಒಳಗಾಗಿ ಕ್ಷಣಿಕ ಸುಖದ ಆಸೆಯಿಂದ ಸಮಾಜಕ್ಕೆ ಕೇಡುಂಟು ಮಾಡುವ ಕೃತ್ಯ ಗಳಿಗೆ ಒಳಗಾಗುತ್ತಿದ್ದಾರೆ. ಮಕ್ಕಳು ತಂದೆ ತಾಯಿ ಗಳಿಗೆ ಹಾಗೂ ಗುರುಹಿರಿಯರಿಗೆ ಹೆಸರು ಮತ್ತು ಕೀರ್ತಿಯನ್ನು ತರುವಂತಹ ವ್ಯಕ್ತಿಗಳಾಗಿಹೊರಹೋಮ್ಮಬೇಕುಎಂದು ಎಲ್ಲ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿದರು.*ಕಾರ್ಯಕ್ರಮದಲ್ಲಿ ಚಿಕ್ಕೋಡಿ ಜಿಲ್ಲಾ ಜನಜಾಗೃತಿವೇದಿಕೆ ಸದಸ್ಯರಾದ ವಿಶ್ವನಾಥ್ ಪುರಾಣಿಕ ಮಠ ರವರ ಮಾತನಾಡಿ ಮಕ್ಕಳು ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಶಿಕ್ಷಣದಲ್ಲಿ ಮತ್ತು ಅವರ ಆರೋಗ್ಯದಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಮಕ್ಕಳಿಗೆ ಮನಮುಟ್ಟುವಂತೆ ಮಾಹಿತಿಯನ್ನು ನೀಡಿದರು. ಮುಂದಿನ ದಿನಗಳಲ್ಲಿ ದುಶ್ಚಟಗಳನ್ನು ಮಾಡದಂತೆ ಮಕ್ಕಳಿಂದ ಪ್ರತಿಜ್ಞೆ ಮಾಡಿಸಿದರು. ಈ ಕಾರ್ಯಕ್ರಮದಲ್ಲಿ. ಶಾಲೆಯ ಮುಕ್ಯೋಪಾಧ್ಯಾಯರಾದ. BA ಮಠಪತಿ ,ಸರ್ ರವರ.. ದುಶ್ಚಟಕ್ಕೆ ಈಗಿನ ಮಕ್ಕಳು ತುಂಬಾ ಬಲಿಯಾಗುತ್ತಿದ್ದು.ಮಕ್ಕಳಿಗೆ ಸಂಸ್ಥೆ. ಅನೇಕ ರೀತಿಯ ಮಾಹಿತಿ ಕಾರ್ಯಾಗಾರ ಹಮ್ಮಿಕೊಂಡಿದ್ದು.. ಇದರಿಂದ. ಜಾಗೃತಿ ಮೂಡಿಸಿದಂತಾಗುತ್ತದೆ ಎಂದು ಶುಭ ಹಾರೈಸಿದರು SDMC ಅಧ್ಯಕ್ಷರಾದ ಮಹಾವೀರ ಸನಕೆ ವಲಯದ ಮೇಲ್ವಿಚಾರಕರಾದ ಆನಂದ ,ಸೇವಾಪ್ರತಿನಿಧಿಗಳು, ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
