ಬೆಂಗಳೂರು ಪ್ರಾದೇಶಿಕ ವಿಭಾಗದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಯೋಜನಾ ಕಛೇರಿ ವ್ಯಾಪ್ತಿಯ ನಲ್ಲೂರು ವಲಯದ ಶ್ರೀ ಮುದ್ದಮ್ಮ ಕಾಕಣ್ಣ ಕಲ್ಯಾಣ ಮಂಟಪದಲ್ಲಿ ನಡೆದ 1870 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರು ಪ್ರಾದೇಶಿಕ ವಿಭಾಗದ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಮಾನ್ಯ ಶ್ರೀ ಶೀನಪ್ಪ ಎಂ. ರವರು ಮಾತನಾಡುತ್ತ 21 ನೇ ಶತಮಾನದ ಪೂರ್ವದಲ್ಲಿ 800 ವರ್ಷಗಳ ಇತಿಹಾಸ ಇರುವ ಶ್ರೀ ಕ್ಷೇತ್ರ ಧರ್ಮಸ್ಥಳದ 21 ನೇ ಧರ್ಮಾಧಿಕಾರಿಗಳಾಗಿ 21 ನೇ ವಯಸ್ಸಿನಲ್ಲಿ ಪಟ್ಟಾಭಿಷೇಕವಾಗಿ ಧರ್ಮವನ್ನು ಕಾಯುವಂತಹ ಜವಬ್ದಾರಿಯನ್ನು ವಹಿಸಿಕೊಂಡಂತಹ ವಿಷೇಷವಾದ ವ್ಯಕ್ತಿತ್ವವನ್ನು ಹೊಂದಿರುವಂತಹ ವಿಶೇಷ ವ್ಯಕ್ತಿಗಳಿದ್ದರೆ ಆದು ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾತ್ರ ಎಂದು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸುವಂತಹ ಪಂಚವಿಧ ದಾನಗಳಲ್ಲಿ ಶ್ರೇಷ್ಠವಾದ ಧಾನ ಎಂದರೆ ಅದುವೆ ಅಭಯದಾನವಾಗಿದ್ದು ಮದ್ಯವರ್ಜನ ಶಿಬಿರಗಳ ಮುಖೇನವಾಗಿ ರಾಜ್ಯಾದ್ಯಂತ ಅಭಯದಾನವನ್ನು ನಡೆಸುತ್ತಾ ಬಂದಿದ್ದು ಗಾಂಧೀಜಿಯವರು ಕಂಡಂತಹ ವ್ಯಸನ ಮುಕ್ತ ಭಾರತವನ್ನು ಸಕಾರಗೊಳಿಸುವಂತಹ ಮಹತ್ತರ ಕಾರ್ಯವನ್ನು ಪೂಜ್ಯ ಹೆಗಡೆಯವರು ಮತ್ತು ಮಾತೃಶ್ರೀ ಅಮ್ಮನವರು ನಡೆಸುತ್ತಾ ಬಂದಿರುವುದು ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯಕರ್ತರಾದ ಹಾಗೂ ಭಕ್ತಾರಾದ ನಾವುಗಳು ಹೆಮ್ಮೆ ಪಡುವಂತ ವಿಷಯವಾಗಿದೆ ಎಂದು ತಿಳಿಸಿದರು. ಇದುವರೆಗೂ ಮದ್ಯವರ್ಜನ ಶಿಬಿರಗಳ ಮುಖೇನ ರಾಜ್ಯಾದ್ಯಂತ ಸುಮಾರು 150000 ಹೆಚ್ಚಿನ ಕುಟುಂಬಗಳ ದೀಪ ಬೆಳಗಿಸುವಂತಹ ಮಹತ್ತರವಾದ ಕಾರ್ಯಕ್ರಮವನ್ನು ಪೂಜ್ಯರು ನಡೆಸುತ್ತಾ ಬಂದಿದ್ದು ಜನಜಾಗೃತಿ ವೇದಿಕೆಯ ಸದಸ್ಯರಾಗಿ ನೀವುಗಳು ಮಾದರಿ ನವಜೀವನ ಸಮಿತಿಗಳನ್ನು ನಡೆಸುವ ಮೂಲಕ ವ್ಯಸನಮುಕ್ತ ಜೀವನವನ್ನು ನಡೆಸಿ ಮಾದರಿ ಶಿಬಿರವನ್ನಾಗಿ ರೂಪಿಸುವ ಮಹತ್ತರ ಜವಬ್ದಾರಿ ನಿಮ್ಮ ಮೇಲಿದೆ ಎಂದು ಕಿವಿಮಾತನ್ನು ಹೇಳಿದರು. ಪೂಜ್ಯ ಹೆಗ್ಗಡೆಯವರ ಸುಪುತ್ರಿಯರಾದ ಶ್ರೀಮತಿ ಶ್ರದ್ದಾಅಮಿತ್ ರವರು ಶಿಬಿರಕ್ಕೆ ಬಂದು ನಿಮ್ಮಗಳಿಗೆ ಆಶೀರ್ವಾದ ಪೂರಕ ಮಾಹಿತಿಯನ್ನು ನೀಡಿದ್ದು ಕುಡಿತಮಾಡುವ ವ್ಯಕ್ತಿಯನ್ನು ಪ್ರೀತಿಯಿಂದ ಕಾಣುವ ಕುಟುಂಬವಿದ್ದರೆ ಅದು ಧರ್ಮಸ್ಥಳದ ಧರ್ಮಾಧಿಕಾರಿಗಳ ಕುಟುಂಬವಾಗಿದ್ದು ಶಿಬಿರಾರ್ಥಿಗಳಾದ ನೀವು ಮದ್ಯ ಮತ್ತು ವ್ಯಸನಮುಕ್ತರಾಗಿ ಗೌರವವನ್ನು ಸಲ್ಲಿಸುವಂತೆ ಸಲಹೆ ನೀಡಿದರು ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಜನಜಾಗೃತಿ ವೇದಿಕೆ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುವ ಮುಖೇನ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ನಿ.ಪ್ರ.ಸ್ವ ಶ್ರೀ ಶ್ರೀ ಶ್ರೀ ಮಹಾದೇವ ಸ್ವಾಮೀಜಿಯವರು ಮಠಾಧ್ಯಕ್ಷರು ಶ್ರೀ ಬಸವಕಲ್ಯಾಣ ಮಠ (ಬಸವ ಲೋಕ) ವಿಜಯಪುರ ದೇವನಹಳ್ಳಿ ತಾಲೂಕು ಶ್ರೀಗಳು ವಹಿಸಿ ಮಾತನಾಡಿ ಶಿಬಿರಾರ್ಥಿಗಳು ಜೀವನಪೂರ್ತಿ ಮದ್ಯಪಾನಕ್ಕೆ ದಿಕ್ಕಾರ ನೀಡುವ ಮೂಲಕ ಶ್ರೀ ಹೆಗ್ಗಡೆಯವರ ದುಷ್ಚಟ ಮುಕ್ತ ಸಮಾಜದ ಕಾರ್ಯದಲ್ಲಿ ಭಾಗವಹಿಸುವಂತೆ ತಿಳಿಸಿ ಮದ್ಯವರ್ಜನ ಶಿಬಿರದ ಬಗ್ಗೆ ರಚಿಸಿದ ಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸರ್ವರಿಗೂ ಶುಭಾಷೀರ್ವಚನವನ್ನು ನೀಡಿ ಆಶೀರ್ವಧಿಸಿದರು.