ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲ್ಲೂಕಿನಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಸಹಸ್ರ ಬಿಲ್ವಾರ್ಚನೆ ಹಾಗೂ ಕುಟುಂಬೋತ್ಸವ ಕಾರ್ಯಕ್ರಮವು ಈ ದಿನ ನಡೆಯಿತು.
ನವಜೀವನ ಸಮಿತಿಯ ದಂಪತಿಗಳು ಜೋಡಿ ಜೋಡಿಯಾಗಿ ಮಂಜುನಾಥ ಸ್ವಾಮಿಗೆ ಬಿಲ್ವಾರ್ಚನೆ ಮಾಡಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾದರು.
ನಂತರ ಸಭಾ ಕಾರ್ಯಕ್ರಮವು ಪ್ರಾರಂಭಗೊಂಡು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಎಂ. ಜಿ. ಕಿತ್ತಲಿ ಸರ್ ರವರು ವಹಿಸಿದ್ದರು. ಉದ್ಘಾಟನೆಯನ್ನು ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ವಿನ್ಸಂಟ್ ಪಾಯಸ್ ಸರ್ ರವರು ನೆರವೇರಿಸಿ ಕೌಟುಂಬಿಕ ಸಾಮರಸ್ಯ, ದಿನನಿತ್ಯದ ಸವಾಲುಗಳು ಹಾಗೂ ಅವುಗಳನ್ನು ಪರಿಹರಿಸಿಕೊಂಡು ಸಮರಸ ಜೀವನ ನಡೆಸುವ ಕುರಿತು ಸುಧೀರ್ಘ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಬಾಗಲಕೋಟೆ ಜಿಲ್ಲೆಯ ನಿರ್ದೇಶಕರಾದ ಶ್ರೀಯುತ ವಿಠ್ಠಲ್ ಸಾಲಿಯನ್ ಸರ್, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಹೇಮಂತ್ ದೊಡ್ಡಮನಿ,
ಶ್ರೀ ಅನಿಲ್ ಚಪ್ಪಳಗಾಂವಿ, ಜನಜಾಗೃತಿ ವೇದಿಕೆಯ ಆಡಳಿತ ಯೋಜನಾಧಿಕಾರಿಗಳಾದ ಮೋಹನ್. ಕೆ. ಸರ್, ಜನಜಾಗೃತಿ ವೇದಿಕೆಯ ಪ್ರಾದೇಶಿಕ ಯೋಜನಾಧಿಕಾರಿಗಳಾದ ಶ್ರೀ ಮಾಧವ ನಾಯಕ್ ಸರ್ ರವರು ಉಪಸ್ಥಿತರಿದ್ದರು.
