ಶ್ರೀ ಪಿ. ಮುರಳಿ ಮೋಹನ್ ರೆಡ್ಡಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಧೀಶರು ಬೆಳಗಾವಿ ಧಾರವಾಡ ಪ್ರಾದೇಶಿಕ ವಿಭಾಗದ ಬೆಳಗಾವಿ ಜಿಲ್ಲೆಯ ಖಾಸಬಾಗ್ ಯೋಜನಾ ವ್ಯಾಪ್ತಿಯ ಹಲಗಾದಲ್ಲಿ ನೆಡೆಯಿತಿರುವ 1619ನೇ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ಕೇವಲ ಸಾಮಾಜಿಕ ಕಳಕಳಿಯ ಕಾರ್ಯಕ್ರಮದ ಜೊತೆಗೆ ಧೈವದತ್ತ ಕಾರ್ಯಕ್ರಮ ವಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ. ಡಿ. ವೀರೇದ್ರ ಹೆಗ್ಗಡೆಯವರ ಈ ಕೈಕರ್ಯ ಶ್ಯಾಘನೀಯ ಸಂಗತಿ. ವ್ಯಸನ ಬಿಟ್ಟರೆ ಅಥವಾ ವ್ಯಸನ ಮಾಡದಿದ್ದರೆ ನೆಮ್ಮದಿಯ ಬದುಕು ನೆಡೆಸಬಹುದು. ಯಾವ ದೇಶದಲ್ಲಿ ವ್ಯಸನ ಕಡಿಮೆ ಇರುತ್ತದೆ ಹಾಗೂ ಯಾವ ಪ್ರದೇಶದಲ್ಲಿ ದುಶ್ಚಟ ಮಾಡುವರ ಸಂಖ್ಯೆ ಕಡಿಮೆ ಇರುತದೋ ಅ ದೇಶ ಅ ಪ್ರದೇಶ ಗೌರವದಿಂದ ಜೀವನ ನೆಡೆಸುತ್ತದೆ. ಇಂದಿನ ದಿನಗಳಲ್ಲಿ ಯುವ ಸಮೂಹ ಸಹ ದುಶ್ಚಟ ದುರಭ್ಯಾಸಕ್ಕೆ ಬಲಿಬೀಳುತ್ತಿರುದು ದುರಂತದ ಸಂಗತಿ. ಈ ನಿಟ್ಟಿನಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣದ ಈ ಕೆಲಸ ಅಭಿನಂದಾನರ್ಹ ಎಂದು ತಿಳಿಸಿದರು.
