ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ, ಉಜಿರೆಯಲ್ಲಿ 197 ನೇ ವಿಶೇಷ ಮದ್ಯವರ್ಜನ ಶಿಬಿರ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ, ಉಜಿರೆ ಇಲ್ಲಿ ಇಂದು 1648 ನೇ ರಾಜ್ಯಮಟ್ಟದ ಶಿಬಿರದಲ್ಲಿ 197 ನೇ ವಿಶೇಷ ಮದ್ಯವರ್ಜನ ಶಿಬಿರವು ಉದ್ಘಾಟನೆಗೊಂಡಿತು. ಶಿಬಿರದ ಧ್ಯೇಯೋದ್ದೇಶಗಳು, ಚಿಕಿತ್ಸಾ ವಿಧಾನಗಳ ಕುರಿತು ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯಸ್ ಸರ್ ರವರು ಅದ್ಭುತವಾಗಿ ಮಾಹಿತಿ ನೀಡಿದರು. ಶಿಬಿರದ ವೈದ್ಯಾಧಿಕಾರಿಗಳಾದ ಶ್ರೀ ಮೋಹನ್ ದಾಸ್ ಗೌಡ ರವರು ಎಲ್ಲಾ ಶಿಭಿರಾರ್ಥಿಗಳ ಅರೋಗ್ಯ ತಪಾಸನೆ ನಡೆಸಿ, ಅಂತಿಮವಾಗಿ ರಾಜ್ಯದ 18 ಜಿಲ್ಲೆಗಳಿಂದ ಬಂದಿರುವ 72 ಮಂದಿ ಯನ್ನು ಚಿಕಿತ್ಸೆಗಾಗಿ ದಾಖಲುಪಡಿಸಲಾಯಿತು. ಜಾಗೃತಿ ಸೌಧ ಕಟ್ಟಡದ ಪ್ರಬಂಧಕರಾದ ಕಿಶೋರ್ ಹಾಗೂ ರಾಜ್ಯದ ಬೇರೆ ಬೇರೆ ಕಡೆಗಳಿಂದ ಬಂದಿರುವ 13 ಮಂದಿ ನವಜೀವನ ಸದಸ್ಯರು ಉಪಸ್ಥಿತರಿದ್ದರು.ಯೋಜನಾಧಿಕಾರಿ ಮೋಹನ್. ಕೆ ಕಾರ್ಯಕ್ರಮ ನಿರ್ವಹಿಸಿದ್ದು, ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ ರವರು ವಂದಿಸಿದರು. ವೇದಿಕೆಯ ಶಿಬಿರಧಿಕಾರಿಗಳು ಹಾಗೂ ಅರೋಗ್ಯ ಸಹಾಯಕರು ಉಪಸ್ಥಿತರಿದ್ದರು.