ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪಟ್ಟಣದ ಅಕ್ಕ ನಾಗಲಾಂಬಿಕಾ ಸಮುದಾಯ ಭವನದ ಸಭಾಂಗಣದಲ್ಲಿ ನಡೆದ 1708 ನೇ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪಟ್ಟಣದ ಅಕ್ಕ ನಾಗಲಾಂಬಿಕಾ ಸಮುದಾಯ ಭವನದ ಸಭಾಂಗಣದಲ್ಲಿ ನಡೆದ 1708 ನೇ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡುತ್ತಾ ಮದ್ಯಪಾನದಿಂದ ಅದೆಷ್ಟು ಕುಟುಂಬಗಳು ಆರ್ಥಿಕವಾಗಿ ಸಾಮಾಜಿಕವಾಗಿ ನೆಮ್ಮದಿ ಕಳೆದುಕೊಂಡಿವೆ, ಇಂತಹ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರದ ಮೂಲಕ ಇಂದು 63 ಜನ ಪಾನಮುಕ್ತರಾಗಿ ನವ ಜೀವನ ನಡೆಸಲು ಸಂಕಲ್ಪ ತೊಟ್ಟು ಬದಲಾಗಿದ್ದಿರಿ, ಒಳ್ಳೆ ಮನಸ್ಸು, ಒಳ್ಳೆಯ ಸ್ನೇಹ, ಒಳ್ಳೆಯ ಜೀವನ ನಡೆಸಿ ಸನ್ಮಾರ್ಗದಲ್ಲಿ ಬದುಕಿ ಸತ್ತ್ಪುರುಷರಾಗಿ ಸಮಾಜಕ್ಕೆ ಬದುಕಿ ತೋರಿಸಿ ಎಂದು ಆಶೀರ್ವಚನ ನೀಡಿದರು.ಚಿಕ್ಕಮಗಳೂರು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಅರವಿಂದ ಸೋಮಯಾಜಿ ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂತಹ ಮದ್ಯವರ್ಜನ ಶಿಬಿರಗಳನ್ನು ನಡೆಸುವುದರ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಇದರ ರೂವಾರಿಗಳಾದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ||ಡಿ ವೀರೇಂದ್ರ ಹೆಗ್ಗಡೆ ಅವರಿಗೆ ವಂದನೆಗಳು,ಇಂದು ನೀವೆಲ್ಲರೂ ಮಧ್ಯಪಾನದಿಂದ ವಿಮುಕ್ತರಾಗಿ ಉತ್ತಮ ಜೀವನ ನಡೆಸಲು ಪಣತೊಟ್ಟಿದ್ದೀರಿ, ನಿಮಗೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜಿಲ್ಲಾ ನಿರ್ದೇಶಕರಾದ ಪ್ರಕಾಶ್ ರಾವ್ ಸರ್ ಮಾತನಾಡುತ್ತಾ ದುಶ್ಚಟ ದುರಭ್ಯಾಸಗಳು ಮನುಷ್ಯನನ್ನು ಕೊಲ್ಲುತಿದೆ, ಜಗತ್ತಿನ ಶ್ರೇಷ್ಠ ಜನ್ಮಗಳಲ್ಲಿ ಮಾನವನ ಜನ್ಮಕೂಡ ಅತ್ಯಂತ ಪವಿತ್ರವಾದುದ್ದು,ಇಂತಹ ಸಂದರ್ಭದಲ್ಲಿ ನೀವುಗಳು ಮಧ್ಯಪಾನದಂತಹ ದುಶ್ಚಟಗಳಿಗೆ ಜೀವನವನ್ನು ಕೊಟ್ಟು ನೆಮ್ಮದಿ ಕಳೆದುಕೊಂಡಿದ್ದೀರಿ, ಆದರೆ ಇಂದು ನೀವೆಲ್ಲರೂ ಪಾನಮುಕ್ತರಾಗಿ ಉತ್ತಮ ಜೀವನ ನಡೆಸಲು ಸಂಕಲ್ಪತೊಟ್ಟು ಪರಿವರ್ತನೆಯಾಗಿದ್ದಿರಿ ನಿಮಗೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು. ತರೀಕೆರೆ ಪುರಸಭೆ ಮುಖ್ಯ ಅಧಿಕಾರಿ ಎಚ್ ಪ್ರಶಾಂತ್ ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಇಂತಹ ಸಮಾಜಮುಖಿ ಕಾರ್ಯಗಳು ನಮಗೆಲ್ಲರಿಗೂ ಪ್ರೇರಣೆಯಾಗಿದೆ,ಇಂತಹ ಶಿಬಿರಗಳು ನಮ್ಮ ತಾಲೂಕಿನಲ್ಲಿ ಇನ್ನಷ್ಟು ಜರುಗಲಿ,ಮದ್ಯಪಾನದಿಂದ ವಿಮುಕ್ತರಾದ ನಿಮಗೆಲ್ಲರಿಗೂ ಮುಂದಿನ ಜೀವನಕ್ಕೆ ಶುಭವಾಗಲಿ ಎಂದು ತಿಳಿಸಿದರು. ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಆರ್ ದೇವಾನಂದ್ ಮಾತನಾಡಿ ಇಂದು 63 ಜನ ಈ ಶಿಬಿರದ ಮುಖಾಂತರ ಪಾನುಮುಕ್ತರಾಗಿ ನವ ಜೀವನ ನಡೆಸಲು ಪಣತೊಟ್ಟಿದ್ದೀರಿ ದುರ್ಜನರ ಸಹವಾಸಗಳನ್ನು ಮಾಡದೆ ಕುಟುಂಬಕ್ಕೆ ಮಾದರಿಯಾಗಿ ಬದುಕಿ ತೋರಿಸಿ, ನಾನು ಎಂಬ ಅಹಂಕಾರ ತೊಡೆದು ಸಮಾಜಕ್ಕೆ ಮಾದರಿಯಾಗಿ ವ್ಯಸನ ಮುಕ್ತ ಸಮಾಜವನ್ನು ಕಟ್ಟುವ ಮತ್ತು ನಡೆಸುವ ಜವಾಬ್ದಾರಿ ನಿಮ್ಮ ಮೇಲಿದೆ ಇಂತಹ ಪುಣ್ಯ ಕಾರ್ಯದ ಸದುಪಯೋಗ ಪಡೆದುಕೊಂಡು ಎಲ್ಲರಿಗೂ ಮಾದರಿಯಾಗಿದ್ದಿರಿ ನಿಮಗೆಲ್ಲರಿಗೂ ಶುಭವಾಗಲಿ ಎಂದು ತಿಳಿಸಿದರು. ಪುರಸಭೆ ಸದಸ್ಯರು ಆದ ಶ್ರೀಮತಿ ಆಶಾ ಅರುಣ್ ಕುಮಾರ್ ಎಲ್ಲ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮವನ್ನು ತಾಲೂಕು ಯೋಜನಾಧಿಕಾರಿಗಳಾದ ಕುಸುಮಾಧರ್ ಕೆ ಸರ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲಾ ಗಣ್ಯ ವ್ಯಕ್ತಿಗಳನ್ನು ಸ್ವಾಗತಿಸಿದರು, ಕಾರ್ಯಕ್ರಮವನ್ನು ಕೃಷಿ ಮೇಲ್ವಿಚಾರಕರಾದ ಸಂತೋಷ್ AC ನಿರೂಪಿಸಿ ಪುರಸಭೆ ವಲಯದ ಮೇಲ್ವಿಚಾರಕರಾದ ಸಿದ್ದಯ್ಯ ವಂದಿಸಿದರು, ಇಂದಿನ ಕುಟುಂಬ ದಿನವನ್ನು ಚಿತ್ರದುರ್ಗ ಪ್ರಾದೇಶಿಕ ಪ್ರಾದೇಶಿಕ ಕಚೇರಿಯ ಜನಜಾಗೃತಿ ವೇದಿಕೆ ಯೋಜನಾಧಿಕಾರಿಗಳಾದ ನಾಗರಾಜ್ ಕುಲಾಲ್ ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಶ್ರೀಮತಿ ಆಶಾ ಅರುಣ್ ಕುಮಾರ್, IDBI ಬ್ಯಾಂಕ್ ನ ಪ್ರಬಂಧಕರಾದ TA ಪ್ರಶಾಂತ್, ಜಿಲ್ಲಾ ಜನಜಾಗತಿ ವೇದಿಕೆ ಸದಸ್ಯರಾದ ಅಸ್ಲಾಂ ಖಾನ್, AC ನಾಗರಾಜ್, ಶಿಬಿರಾಧಿಕಾರಿ ಶ್ರೀ ನಂದಕುಮಾರ್ ಪಿ ಪಿ ಮತ್ತು ಜನ ಜಾಗೃತಿ ವೇದಿಕೆ ಮೇಲ್ವಿಚಾರಕರಾದ ರುದ್ರಪ್ಪ,ಯೋಗ ಶಿಕ್ಷಕ ಮತ್ತು ನಿವೃತ್ತ ಶಿಕ್ಷಕರಾದ ಶ್ರೀ ರುದ್ರಪ್ಪ ಮಾಸ್ಟರ್, ಸ್ವಾಸ್ಥ್ಯ ಸಂಕಲ್ಪ ತರಬೇತುದಾರರು ಆದ ಶ್ರೀ ತಿಮ್ಮಯ್ಯ,ಮತ್ತು ಶ್ರೀನಿವಾಸ್, ಅಕ್ಕ ನಾಗಲಾಂಬಿಕಾ ಸಮುದಾಯ ಭವನ ವ್ಯವಸ್ಥಾಪನ ಸಮಿತಿಯ ಶೀ ಚಂದ್ರಶೇಖರ್ ಮತ್ತು ನಾಗರಾಜ್, ಪುರಸಭೆ ಮತ್ತು ಅಮೃತಾಪುರ ವಲಯದ ಸೇವಾ ಪ್ರತಿನಿಧಿಗಳು, ಮೇಲ್ವಿಚಾರಕ ವರ್ಗದವರು ಉಪಸ್ಥಿತರಿದ್ದರು