ಶೃಂಗೇರಿ ತಾಲೂಕಿನಲ್ಲಿ ತಾಲೂಕು ಮಟ್ಟದ ನವಜೀವನ ಸಮಿತಿಯ ಸಮಾವೇಶ ಕಾರ್ಯಕ್ರಮ

Janajagurthi Vedike News

ಶೃಂಗೇರಿ ತಾಲೂಕಿನಲ್ಲಿ ತಾಲೂಕ್ ಮಟ್ಟದ ನವಜೀವನ ಸಮಿತಿಯ ಸಮಾವೇಶ ಕಾರ್ಯಕ್ರಮವು GSB ಸಮುದಾಯ ಭವನದಲ್ಲಿ ಡಾ. ನಿರಂಜನ ಕುಮಾರ್ ಸರ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾಹಿತಿ ನೀಡಿದರು. ನವಜೀವನ ಸದಸ್ಯರಿಗೆ ಪ್ರಾದೇಶಿಕ ನಿರ್ದೇಶಕರು ವಿವೇಕ್ ವಿ. ಪಾಯಸ್ ರವರು ಮಾರ್ಗದರ್ಶನ ಮಾಡುತ್ತಾ ನವಜೀವನ ಸದಸ್ಯರು ಬೆಳವಣಿಗೆ, ಜನಜಾಗೃತಿ ವೇದಿಕೆಯ ಕಾರ್ಯಕ್ರಮ, ವ್ಯಕ್ತಿ ಮತ್ತು ಕುಟುಂಬ, ವ್ಯಕ್ತಿ ಮತ್ತು ಸಮಾಜದ ಬಗ್ಗೆ ಉಪನ್ಯಾಸ ಮಾಡಿದರು. ನವಜೀವನ ಸದಸ್ಯರ ಸಾಧನೆಗೆ ಜನಜಾಗೃತಿ ವೇದಿಕೆ ಎಲ್ಲಾ ರೀತಿಯಲ್ಲೂ ಸಹಕಾರ ಮಾಡಲಿದೆ ಎಂದು ಆಶಿಸಿದರು. ಜಿಲ್ಲಾ ನಿರ್ದೇಶಕರು, ಜಿಲ್ಲಾ ವೇದಿಕೆಯ ಅದ್ಯಕ್ಷರು ಮತ್ತು ಪದಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರು, ಪೋಷಕರು ತಾಲೂಕ್ ಯೋಜನಾಧಿಕಾರಿಗಳು, ಜನಜಾಗೃತಿ ಕಾರ್ಯಕರ್ತರು ಉಪಸ್ಥಿತರಿದ್ದರು.