ಶಿವಮೊಗ್ಗ ತಾಲೂಕಿನಲ್ಲಿ ನಡೆದ 1890 ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮ

Janajagurthi Vedike News

ಪರಮಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ|| ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ನವುಲೆ ಶಿವಮೊಗ್ಗ ತಾಲೂಕು ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಶಿವಮೊಗ್ಗ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಶಿವಮೊಗ್ಗ ಜಿಲ್ಲೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಮಾರ್ಗದರ್ಶನದೊಂದಿಗೆ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಅಬ್ಬಲಗೆರೆ ವಲಯ, ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಜರಗಿದ 1890 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಶಿವಮೊಗ್ಗ ನಗರದ ನವುಲೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ನಡೆಯಿತು. ಶ್ರೀ ನಾಗರಾಜ್ ಕುಲಾಲ್ ಯೋಜನಾಧಿಕಾರಿ ಜನಜಾಗೃತಿ ವಿಭಾಗ ಪ್ರಾದೇಶಿಕ ಕಛೇರಿ ಚಿತ್ರದುರ್ಗ ಇವರು ಕುಟುಂಬ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕೌಟುಂಬಿಕ ಜೀವನದ ಮಹತ್ವವನ್ನು ಬೋಧಿಸಿದರು. ಶ್ರೀ ಮಂಜುನಾಥ ಎನ್. ಆರ್. ಅಧ್ಯಕ್ಷರು 1855 ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಇವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ದಾನಿಗಳನ್ನು, ಸಂಘ ಸಂಸ್ಥೆಗಳನ್ನು ಮತ್ತು ನಿಸ್ವಾರ್ಥ ಸೇವೆ ಸಲ್ಲಿಸಿದವರನ್ನು ಅಭಿನಂದಿಸಿ ಮಾತನಾಡಿ ನೂತನ ನವಜೀವನ ಸಮಿತಿ ಸದಸ್ಯರುಗಳಿಗೆ ಶ್ವೇತ ವರ್ಣದ ವಸ್ತ್ರವನ್ನು ವೈಯಕ್ತಿಕ ನೆಲೆಯಲ್ಲಿ ವಿತರಿಸಿದರು. ಶ್ರೀ ಈಶ್ವರಪ್ಪ ಎಂ. ಗೌರವಾಧ್ಯಕ್ಷರು 1890 ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಶಿವಮೊಗ್ಗ ಇವರು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮದ ಕುರಿತು ಅಧ್ಯಕ್ಷೀಯ ಮಾತುಗಳನ್ನಾಡಿದರು. ಶ್ರೀ ಎಂ. ಶ್ರೀಕಾಂತ್ ಸಮಾಜ ಸೇವಕರು ಇವರು ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಎಂಟು ದಿನಗಳ ಕಾಲ ಮನಃಪರಿವರ್ತನೆಯ ಚಿಕಿತ್ಸೆ ಪಡೆದು ಪಾನಮುಕ್ತರಾದ ತಮ್ಮಿಂದ ಸಧೃಡ ಸಮಾಜ ನಿರ್ಮಾಣವಾಗಲಿ ಎಂದು ಶುಭವನ್ನು ಹಾರೈಸಿ ನೂತನ ನವಜೀವನ ಸದಸ್ಯರ ಕುಟುಂಬದ ಮಹಿಳೆಯರಿಗೆ ವೈಯಕ್ತಿಕ ನೆಲೆಯಲ್ಲಿ ಸೀರೆಯನ್ನು ವಿತರಿಸಿದರು. ಶ್ರೀ ಪಾಲಾಕ್ಷಪ್ಪ ಉಪಾಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಶಿವಮೊಗ್ಗ ಇವರು ಮಾತನಾಡಿ ಮದ್ಯವರ್ಜನ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು. ಅತಿಥಿಗಳಾಗಿ ಶ್ರೀ ಮುರಳೀಧರ್ ಶೆಟ್ಟಿ ಕೆ. ಮಾನ್ಯ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. (ರಿ.) ಶಿವಮೊಗ್ಗ ಇವರು ಮಾತನಾಡಿ ಮದ್ಯವರ್ಜನ ಶಿಬಿರ ಇದೊಂದು ಪವಿತ್ರ ಕಾರ್ಯಕ್ರಮ. ಇದು ಕೇವಲ ಧರ್ಮಸ್ಥಳದ ಕಾರ್ಯಕ್ರಮ ಅಲ್ಲ. ಬದಲಾಗಿ ಇದೊಂದು ಸಮುದಾಯದ ಸಹಭಾಗಿತ್ವದ ಕಾರ್ಯಕ್ರಮ. ಆದ್ದರಿಂದ ಸಾರ್ವಜನಿಕರ ತನು-ಮನ-ಧನ ಸಹಕಾರದೊಂದಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರವನ್ನು ಸಂಘಟಿಸಿದ ವ್ಯವಸ್ಥಾಪನಾ ಸಮಿತಿ ಹಾಗೂ ಜನಜಾಗೃತಿ ವೇದಿಕೆಯ ಅತ್ಯುತ್ತಮ ಸಹಕಾರವನ್ನು ಸ್ಮರಿಸಿ ಕಾರ್ಯಕ್ರಮಕ್ಕೆ ಶುಭಾಶಯವನ್ನು ಕೋರಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಉದಯಕುಮಾರ್ ಶೆಟ್ಟಿ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಶಿವಮೊಗ್ಗ, ಶ್ರೀಮತಿ ಮಮತ ಶಿವಣ್ಣ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಶಿವಮೊಗ್ಗ, ಶ್ರೀಮತಿ ಶಾರದಮ್ಮ ಬಿ.ಟಿ ರೀಜನಲ್ ಮ್ಯಾನೇಜರ್ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಿವಮೊಗ್ಗ, ಶ್ರೀ ಜಿ.ಕೆ ರಾಮಚಂದ್ರ ಉಪಾಧ್ಯಕ್ಷರು 1890ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಶ್ರೀಮತಿ ಸರೋಜ ಉಪಾಧ್ಯಕ್ಷರು 1890ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಶ್ರೀಮತಿ ಜಾನಕಮ್ಮ ಉಪಾಧ್ಯಕ್ಷರು 1890ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಶ್ರೀಮತಿ ರೂಪ ಆದರ್ಶ ಕ್ಷೇತ್ರ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಶಿವಮೊಗ್ಗ ಇವರು ಉಪಸ್ಥಿತರಿದ್ದು ನವಜೀವನ ಸದಸ್ಯರಿಗೆ ಶುಭವನ್ನು ಹಾರೈಸಿದರು. ಶ್ರೀ ನಂದಕುಮಾರ್ ಪಿ ಪಿ ಶಿಬಿರಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಮತ್ತು ಶ್ರೀಮತಿ ನೇತ್ರಾವತಿ ಆರೋಗ್ಯ ಸಹಾಯಕಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಇವರು ಎಂಟು ದಿನದ ಮದ್ಯವರ್ಜನ ಶಿಬಿರವನ್ನು ನಿರ್ವಹಿಸಿದರು. ಶ್ರೀಮತಿ ಅನ್ನಪೂರ್ಣ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಅಬ್ಬಲಗೆರೆ ವಲಯ, ತಾಲೂಕಿನ ಎಲ್ಲಾ ಮೇಲ್ವಿಚಾರಕರುಗಳು, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ವಲಯದ ಸೇವಾಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು /ಪದಾಧಿಕಾರಿಗಳು, ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರುಗಳು, ನವಜೀವನ ಸಮಿತಿ ಸದಸ್ಯರುಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕಾರ್ಯಕ್ರಮವನ್ನು ಶ್ರೀ ನಾಗರಾಜ್ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ (ರಿ.) ಇವರು ಸ್ವಾಗತಿಸಿ, ಶ್ರೀಮತಿ ಪ್ರಭಾವತಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಶಿವಮೊಗ್ಗ ತಾಲೂಕು ಇವರು ನಿರ್ವಹಿಸಿ, ಶ್ರೀಮತಿ ಅನ್ನಪೂರ್ಣ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಅಬ್ಬಲಗೆರೆ ವಲಯ ಇವರು ವಂದಿಸಿದರು. ಶ್ರೀಮತಿ ಅನ್ನಪೂರ್ಣ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಅಬ್ಬಲಗೆರೆ ವಲಯ, ತಾಲೂಕಿನ ಎಲ್ಲಾ ಮೇಲ್ವಿಚಾರಕರುಗಳು, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ವಲಯದ ಸೇವಾಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು /ಪದಾಧಿಕಾರಿಗಳು, ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರುಗಳು, ನವಜೀವನ ಸಮಿತಿ ಸದಸ್ಯರುಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.