ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲೂಕಿನ 1603 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿ ಬೆಕ್ಕಿನಕಲ್ಮಠ ಇವರು ಶಿಬಿರಾರ್ಥಿಗಳನ್ನು& ಎಲ್ಲರನ್ನು ಉದ್ದೇಶಿಸಿ ಆಶಿರ್ವಚನ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ಶ್ರೀ ರಾಜಣ್ಣ ಕೊರವಿ ಶಿರಾರ್ಥಿಗಳಿಗೆ ಶುಭ ಹಾರೈಕೆ ಮಾಡಿರುತ್ತಾರೆ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ ಜಿ ನಿಂಗಪ್ಪ, ರುದ್ರೇಗೌಡ ವಿಧಾನ ಪರಿಷತ್ ಸದಸ್ಯರು ಶಿವಮೊಗ್ಗ, ಶ್ರೀನಿವಾಸ್ ಕರಿಯಣ್ಣ ವೈದ್ಯರು ಶಿವಮೊಗ್ಗ, ಶ್ರೀ ಚಂದ್ರಶೇಖರ್ ನಿರ್ದೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಶಿವಮೊಗ್ಗ ಜಿಲ್ಲೆ , ಯೋಜನಾಧಿಕಾರಿಗಳು , ಶ್ರೀಮತಿ ರೂಪ, ಶ್ರೀ ನಾಗರಾಜ್, ಮೇಲ್ವಿಚಾರಕರು ಸೇವಾಪ್ರತಿನಿಧಿಗಳು, ಶಿಬಿರಾರ್ಥಿಗಳು ಮತ್ತು ಮನೆಯವರು, ಉಪಸ್ಥಿತರಿದ್ದರು.
